Crime News

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಕೋರಂಗಾಲ ಗ್ರಾಮದ ನಿವಾಸಿ ಶ್ರೀಮತಿ ಸರೋಜಿನಿ ಎಂಬವರ ಮಗ 38 ವರ್ಷ ಪ್ರಾಯದ ಬಾಲನ್ ಎಂಬವರು ದಿನಾಂಕ 19-11-2018 ರಂದು ರಾತ್ರಿ ಕೋರಂಗಾಲ ಗ್ರಾಮದ ನಿಡುಬೆ ಮಾದಪ್ಪ ಎಂಬವರ ಲೈನು ಮನೆಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮತಿ ಸರೋಜಿನಿ ಯವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

     ಭಾಗಮಂಡಲ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಮಮತ ಎಂಬವರ ಅಣ್ಣ ಮನೋಜ್ ಕುಮಾರ್ ಎಂಬವರು ದಿನಾಂಕ 15-11-2018 ರಂದು ಸಂಜೆ ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ದಿನಾಂಕ 20-11-2018 ರಂದು ಸಂಜೆ ಸದರಿಯವರ ಮೃತ ದೇಹವು ತಣ್ಣಿಮಾನಿ ಗ್ರಾಮದ ಕನ್ನಿಕ ಹೊಳೆಯಲ್ಲಿ ಪತ್ತೆಯಾಗಿದ್ದು ಸದರಿಯಾತ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಬಸ್ಸ್ ಬೈಕಿಗೆ ಡಿಕ್ಕಿ ಸವಾರನಿಗೆ ಗಾಯ:

     ಕುಶಾಲನಗರ ಸಮೀಪದ ಹೊಸಳ್ಳಿ ಗ್ರಾಮದ ನಿವಾಸಿ ಕೆ.ವಿ. ನಾಗರಾಜು ಎಂಬವರು ದಿನಾಂಕ 20-11-2018 ರಂದು ಮಧ್ಯಾಹ್ನ ಶಿರಂಗಾಲ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೋಣನೂರು ಕಡೆಯಿಂದ ಬಂದ ಮಿನಿ ಬಸ್‍ನ್ನು ಅದರ ಚಾಲಕ ಅತೀ ವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ಮುಂದುಗಡೆ ಹೋಗುತ್ತಿದ್ದ ಹರೀಶ್ ಎಂಬವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಹರೀಶ್ ರವರು ಬೈಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಈ ಸಂಬಂಧ ನಾಗರಾಜುರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ,