Crime News

ಗಾಂಜಾ ಸೇವನೆ, ಪ್ರಕರಣ ದಾಖಲು:

ದಿನಾಂಕ 20-11-2018 ರಂದು ಸಿದ್ದಾಪುರ ಠಾಣಾ ಸರಹದ್ದಿನ ವಿರಾಜಪೇಟೆ ರಸ್ತೆಯಲ್ಲಿ ಚರ್ಚ್ ಮೈದಾನಲ್ಲಿ ಕರಡಿಗೋಡು ಗ್ರಾಮದ ನಿವಾಸಿ ಟಿಸನ್ ಎಂಬ ವ್ಯಕ್ತಿ ಗಾಂಜಾ ಸೇವಿಸುತ್ತಿರುವುದನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಬ್ಯಾಂಕ್ ಮಾಹಿತಿ ಪಡೆದು ಹಣ ವಂಚನೆ:

ಮಡಿಕೇರಿ ನಗರದ ಚೈನ್ ಗೇಟ್ ಬಳಿ ವಾಸವಾಗಿರುವ ಶ್ರೀಮತಿ ಎಂ. ಕಾವೇರಿ ಎಂಬವರಿಗೆ ದಿನಾಂಕ 19-11-2018 ಬೆಳಗ್ಗೆ ಅವರ ಸಿಂಡಿಕೇಟ್ ಬ್ಯಾಂಕ್‍ನಲ್ಲಿರುವ ಖಾತೆಗೆ ಸಂಬಂಧಿಸಿದ ಮಾಹಿತಿ ಮತ್ತು ಆಧಾರ್‍ಕಾರ್ಡ್‍ ಸಂಖ್ಯೆಯನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿರುವ 20,000/- ರೂ. ಗಳನ್ನು ಡ್ರಾ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ:

ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಚೌಡ್ಲು ಗ್ರಾಮದ ನಿವಾಸಿ ಬಿ.ಎಸ್. ಶರತ್ ಎಂಬವರು ದಿನಾಂಕ 20-11-2018 ರಂದು ತಮ್ಮ ಮನೆಯಲ್ಲಿದ್ದಾಗ ಪಕ್ಕದ ಮನೆಯಲ್ಲಿ ಜಗಳ ಮಾಡುವು ಸದ್ದು ಕೇಳೆ ಅಲ್ಲಿಗೆ ಹೋಗಿದ್ದು ಅಲ್ಲಿ ವಾಸು ಎಂಬವರು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪ್ರಸನ್ನ ಎಂಬವರೊಂದಿಗೆ ಜಗಳ ಮಾಡುತ್ತಿದ್ದುದನ್ನು ತಡೆಯಲು ಹೋದ ಬಿ.ಎಸ್. ಶರತ್ ರವರ ಮೇಲೆ ವಾಸುರವರು ಕತ್ತಿಯಿಂದ ಹಲ್ಲೆ ಮಾಡಿ ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ನಗರದ ಚೌಡ್ಲು ಗ್ರಾಮದ ನಿವಾಸಿ ವೆಂಕಟೇಶ್ ಎಂಬವರು ದಿನಾಂಕ 19-11-2018 ರಂದು ನಗರದ ಸಪಾಲಿ ಬಾರ್ ಮುಂದೆ ಹೋದಾಗ ಅಲ್ಲಿದ್ದ ಮೂರ್ತಿ ಹಾಗು ಶಿವ ರವರುಗಳು ಗಲಾಟೆ ಮಾಡಿ ಹಲ್ಲೆ ಮಾಡಿರುತ್ತಾರೆಂದು  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಸ್ವಾಭಾವಿಕ ಮರಣ:

ಹಾಸನ ಜಿಲ್ಲೆಯ ವನಗೂರು ಗ್ರಾಮದ ನಿವಾಸಿ ಪ್ರವೀಣ್ ಕುಮಾರ್ ಎಂಬವರ ಮಗ ಕಾರ್ತಿಕ್ ಕುಶಾಲನಗರ ಡಿಪ್ಲೊಮೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು  ಅಲ್ಲಿಯೇ ವಸತಿ ನಿಲಯದಲ್ಲಿ ವಾಸಮಾಡಿಕೊಂಡಿದ್ದು ದಿನಾಂಕ 20-11-2018 ರಂದು ವಸತಿ  ಗೃಹದಿಂದ ಹೊರಗೆ ಹೋಗಿ ಮತ್ತೆ ಹಿಂದಕ್ಕೆ ಬಾರದೇ ಇರುವ ಕಾರಣ ಆತನನ್ನು ಹುಡುಕಿದಾಗ ಮಾದಾಪಟ್ನ ಗ್ರಾಮದ ಕಾವೇರಿ ಹೊಳೆಯಲ್ಲಿ ಆತನ ಶವ ಪತ್ತೆಯಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.