Crime News

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ತಾವಳಗೇರಿ ಗ್ರಾಮದ ನಿವಾಸಿಯಾದ ದೇಕಮಾಡ ಕೆ. ದೇವಯ್ಯ ಎಂಬವರ ಮಗ 24 ವರ್ಷ ಪ್ರಾಯದ ಕಾರ್ಯಪ್ಪ ಎಂಬವರು ದಿನಾಂಕ 22-11-2018 ಬೆಳಿಗ್ಗೆ 7-45 ಗಂಟೆಯ ಸಮಯದಲ್ಲಿ ರಿವಾಲ್ವರ್‍ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮಹಿಳೆಗೆ ಪಿಕ್‍ಅಪ್‍ ವಾಹನ ಡಿಕ್ಕಿ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹುದೂರು ಗ್ರಾಮದ ನಿವಾಸಿ ತಾಯಮ್ಮ ಎಂಬವರು ದಿನಾಂಕ 22-11-2018 ರಂದು ಕಾನೂರು ಜಂಕ್ಷನ್‍ ನಲ್ಲಿ ನಿಂತುಕೊಂಡಿರುವಾಗ್ಗೆ ಗೋಣಿಕೊಪ್ಪ ಕಡೆಯಿಂದ ಬಂದ ಬೊಲೆರೋ ಪಿಕ್‍ಅಪ್‍ ವಾಹನ ಡಿಕ್ಕಿಯಾಗಿ ತಲೆಗೆ ಗಾಯವಾಗಿ ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಕಾರು ಡಿಕ್ಕಿ:

ವಿರಾಜಪೇಟೆ ತಾಲೋಕು ಕಡಂಗಮರೂರು ಗ್ರಾಮದನಿವಾಸಿ ಕೆ.ಎನ್. ಅನಿಲ್ ಎಂಬವರು ದಿನಾಂಕ 22-11-2018 ರಂದು ಮೋಟಾರ್ ಸೈಕಲಿನಲ್ಲಿ ವಿರಾಜಪೇಟೆ ನಗರದ ಕಡೆಗೆ ಹೋಗುತ್ತಿದ್ದಾಗ ಚಿಕ್ಕಪೇಟೆಗೆ ತಲುಪುವಾಗ್ಗೆ  ಮಡಿಕೇರಿ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ  ಬೈಕ್ ಸಮೇತ ಸವಾರ ಕೆ.ಎನ್. ಅನಿಲ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು. ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.