Crime News

ವಾಹನ ಅಪಘಾತ; ಮಹಿಳೆ ಸಾವು

ದಿನಾಂಕ 22/11/2018ರಂದು ಮಾದಾಪುರ ಬಳಿಯ ನಂದಿಮೊಟ್ಟೆ ಎಂಬಲ್ಲಿನ ಕಾಫಿ ತೋಟಕ್ಕೆ ಮಹಿಂದ್ರಾ ಕ್ಯಾಂಪರ್ ವಾಹನವೊಂದರಲ್ಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಕೆಲವರು ವಾಹನದ ಹಿಂದೆ ನಿಂತಿದ್ದು ಸಲ್ಮಾ ಮತ್ತು ಮರಿಯಂ ಎಂಬ ಇಬ್ಬರು ಕಾರ್ಮಿಕರು ವಾಹನದೊಳಗೆ ಕುಳಿತ್ತಿದ್ದು ಚಾಲಕ ಗಣೇಶ್‌ ಎಂಬಾತನು ವಾಹನದ ಹ್ಯಾಂಡ್‌ ಬ್ರೇಕನ್ನು ಸರಿಯಾಗಿ ಹಾಕದ ಕಾರಣ ವಾಹನ ಹಿಂದಕ್ಕೆ ಚಲಿಸಿದ್ದು ವಾಹನದೊಳಗಿದ್ದಾ ಸಲ್ಮಾ ಎಂಬಾಕೆಯು ಗಾಬರಿಯಿಂದ ಹೊರಕ್ಕೆ ಹಾರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುತ್ತಿರುವಾಗ ದಾರಿಯಲ್ಲಿ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬ್ಯಾಟರಿ ಕಳವು ಪ್ರಕರಣ

ಕುಶಾಲನಗರ ಬಳಿಯ ಮದಲಾಪುರ ನಿವಾಸಿ ಪಿ.ವಿಜಯಪ್ರಕಾಶ್ ಎಂಬವರು ರಂಗಸಮುದ್ರ ಗ್ರಾಮದಲ್ಲಿ ನಿರ್ಮಿಸಿದ್ದ ಶೆಡ್ಡಿಗೆ ದಿನಾಂಕ 22/11/2018ರ ರಾತ್ರಿ ವೇಳೆ ಯಾರೋ ಕಳ್ಳರು ಮೇಲ್ಛಾವಣಿ ಮೂಲಕ ಪ್ರವೇಶಿಸಿ ಒಳಗಿದ್ದ ಸುಮಾರು ರೂ.48,000/- ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ