Crime News

ಕೆರಗೆ ಬಿದ್ದು ವ್ಯಕ್ತಿಯ ಮರಣ

ವ್ಯಕ್ತಿಯೊಬ್ಬರು ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೋಕಿನ ಮೂವತ್ತೋಕ್ಲು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 23-11-2018 ರಂದು ಮೂವತ್ತೋಕ್ಲು ಗ್ರಾಮದ ನಿವಾಸಿಯಾದ ಪಾಪಣ್ಣ ಎಂಬುವವರು ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಾಯಿ ಚೋಂದಮ್ಮನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

ದಿನಾಂಕ 24-11-2018 ರಂದು ಪೊನ್ನಂಪೇಟೆ ಠಾಣೆಯ ಪಿ.ಎಸ್.ಐ ಮಹೇಶ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ತಿತಿಮತಿ ಗ್ರಾಮದಲ್ಲಿರುವ ರಾಯಲ್ ಬ್ರಾಂಡ್ ಬ್ರಾಂದಿ ಶಾಫಿನ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆಟವಾಡುತ್ತಿದ್ದ ತಿತಿಮತಿ ಗ್ರಾಮದವರಾದ ಸತ್ಯ, ವಸಂತ, ಪ್ರದೀಪ್ ಕುಮಾರ್, ಸತೀಶ ಮತ್ತು ಚಂದ್ರುರವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ನಗದು ಹಣ 1,950=00 ರೂವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.