Crime News

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಮಾನಸಿಕ ಅಸ್ವತ್ಥ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೋಕು ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಎಂಬವರ ಪತಿ 47 ವರ್ಷ ಪ್ರಾಯದ ಹೆಚ್.ಪಿ ಜನಾರ್ಧನರವರು ಕೆಲವು ಸಮಯದಿಂದ ಮಾನಸಿಕವಾಗಿ ಅಸ್ವತ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 24-11-2018 ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿ ಬಾಡಗ ಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ.ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಡಿಯಿಂದ ಬಿದ್ದು ವ್ಯಕ್ತಿ ಸಾವು:

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ನಾಪೋಕ್ಲು ನಗರದಲ್ಲಿರುವ ಗಣೇಶ ಕಾಂಪ್ಲೆಕ್ಸ್ ನಲ್ಲಿ ವಾಸವಾಗಿರುವ ಶ್ರೀಮತಿ ನೀಲಮ್ಮನವರ ಪತಿ ತಾಪಂಡ ನಿಖಿಲ್ ಗಣಪತಿ ರವರು ದಿನಾಂಕ 24-11-2018 ರಂದು ತನ್ನ ಸ್ನೇಹಿತನೊಂದಿಗೆ ಅವರು ವಾಸವಾಗಿರುವ ಕಟ್ಟಡದ ಮೇಲೆ ಮಾತನಾಡಿಕೊಂಡಿರುವಾಗ್ಗೆ ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಸದರಿಯವರು ಮೃತಪಟ್ಟಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಬೈಕ್ ಕಳವು:

ಮನೆಯ ಹತ್ತಿರದ ಕಾಫಿ ಕಣದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ಮಡಿಕೇರಿ ತಾಲೋಕು ಬೆಟ್ಟಗೇರಿ ಗ್ರಾಮದಲ್ಲಿ ವಾಸವಾಗಿರುವ ಕೆ.ಜಿ. ಪೂಣಚ್ಚ ಎಂಬವರು ದಿನಾಂಕ 24-11-2018 ರಂದು ರಾತ್ರಿ 8-00 ಗಂಟೆಗೆ ತಮ್ಮ ಮೋಟಾರ್ ಸೈಕಲನ್ನು ಬೆಟ್ಟಗೇರಿಯಲ್ಲಿರುವ ತಮ್ಮ ಮನೆಯ ಪಕ್ಕದಲ್ಲಿ ಇರುವ ಕಾಫಿ ಕಣದಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆಗೆ ಯತ್ನ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದ ನಿವಾಸಿ ಕುಪ್ಪಂಡಮಾಡ ಮೌನ ಎಂಬವರು ದಿನಾಂಕ 25-11-2018 ರಂದು ಸಂಜೆ 6-40 ಗಂಟೆಗೆ ಬಿಣುನಾಣಿ ಗ್ರಾಮದಲ್ಲಿ ಅವರ ಸಂಬಂಧಿಯೊಬ್ಬರ ಮನೆಗೆ ಹೋಗುತ್ತಿದ್ದಾಗ ಆರೋಪಿಗಳಾದ ಮುದ್ದಪ್ಪ, ರಸಿಕ @ ದರ್ಶನ್ ಮತ್ತು ದೀಪುಬೋಪಣ್ಣ ರವರುಗಳು ಸೇರಿ ಕುಪ್ಪಂಡಮಾಡ ಮೌನರವರನ್ನು ದಾರಿಯಲ್ಲಿ ತಡೆದು ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ್ದು, ಅವರಿಂದ ತಪ್ಪಿಸಿಕೊಂಡು ಹೋದಾಗ ಅವರನ್ನು ಹಿಡಿದು ಬಟ್ಟೆಯನ್ನು ಹರಿದುಹಾಕಿದ್ದು, ಅಲ್ಲದೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.