Crime News

ಹಲ್ಲೆ ಪ್ರಕರಣ

ದಿನಾಂಕ 25/11/2018ರಂದು ನಾಪೋಕ್ಲು ಬಳಿಯ ಬೇತು ನಿವಾಸಿ ಹೆಚ್‌.ಎಂ.ಶಾಂತಿ ಎಂಬವರು ಮನೆಯಲ್ಲಿರುವಾಗ ನೆರೆಮನೆಯ ಮನೀಷ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿಯಿಂದ ಶಾಂತಿಯವರಿಗೆ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 25/11/2018ರಂದು ಸಿದ್ದಾಪುರ ಬಳಿಯ ಪುಲಿಯೇರಿ ನಿವಾಸಿ ಕುಮಾರ ಎಂಬಾತನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 25/11/2018ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಜೇನುಕುರುಬರ ಕೃಷ್ಣ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಕೃಷ್ಣರವರು ವಿಪರೀತ ಮದ್ಯವ್ಯಸನಿಯಾಗಿದ್ದು ಮದ್ಯಪಾನದ ಅಮಲಿನಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/11/2018ರಂದು ಕೊಡ್ಲಿಪೇಟೆ ಬಳಿಯ ದೊಡ್ಡಕುಂದ ನಿವಾಸಿ ಸಿದ್ದಯ್ಯ ಎಂಬವರು ಕೊಡ್ಲಿಪೇಟೆ ನಗರದ ಕಡೇಪೇಟೆ ಬಳಿ ಇರುವಾಗ ದೊಡ್ಡಕುಂದ ನಿವಾಸಿ ದಿವಾಕರ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸೈಕಲ್ ಚೈನಿನಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸಿದ್ದಯ್ಯನವರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪುಟ್ಟಮ್ಮ ಎಂಬವರು ಪ್ರತಿ ದೂರು ನೀಡಿದ್ದು  ಶನಿವಾರಸಂತೆ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

ದಿನಾಂಕ 26/11/2018ರಂದು ಶನಿವಾರಸಂತೆ ಬಳಿಯ ಕಾಜೂರು ನಿವಾಸಿ ಕೆ.ಎಂ.ಆಶ ಎಂಬವರು ಹಾಗೂ ಮನೆಯವರು ಮನೆಯಲ್ಲಿಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾತ್‌ರೂಮಿನ ಕಿಟಕಿ ಮುರಿದು ಒಳ ಪ್ರವೇಶಿಸಿ ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ ಆಲ್ಮೆರಾದ ಬೀಗ ಮುರಿದು ಅದರಲ್ಲಿದ್ದ ರೂ. 70,000/- ನಗದು ಹಾಗೂ ರೂ.50,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.