Crime News

ಜುವೆಲ್ಲರಿ ಅಂಗಡಿಯಿಂದ ಕಳ್ಳನಕ್ಕೆ ಯತ್ನ:

ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಪಿ.ಎ.ಶಾಹಿರ್ ರವರಿಗೆ ಸೇರಿದ ಜುವೆಲ್ಲರಿ ಅಂಗಡಿಗೆ ದಿನಾಂಕ 26-11-2018ರ ರಾತ್ರಿ ಯಾರೋ ಕಳ್ಳರು ಅಂಗಡಿಯ ಗೋಡೆಯನ್ನು ಕೊರೆದು ಕಳ್ಳತನಕ್ಕೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋವಿ ತೋರಿಸಿ ಕೊಲೆ ಬೆದರಿಕೆ:

ನಾಪೋಕ್ಲು ಠಾಣಾ ಸರಹದ್ದಿನ ಚೇಲಾವರ ಗ್ರಾಮದನಿವಾಸಿ ಕೆ.ಎಂ. ಲವ ಎಂಬವರರು ದಿನಾಂಕ 26-11-2018 ರಂದು ತಮ್ಮ ಮನೆಯಲ್ಲಿದ್ದು ಅವರ ಮಕ್ಕಳು ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಆರೋಪಿ ಶಿವಪ್ಪ ಎಂಬವರು ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡು ಬಂದು ವಿನಾ ಕಾರಣ ಜಗಳವಾಡಿ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ರಿಕ್ಷಾ ಡಿಕ್ಕಿ:

ಸುಂಟಿಕೊಪ್ಪ ನಗರದ ಮಧುರಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹಕೀಮ್ ಎಂಬವರು ದಿನಾಂಕ 27-11-2018 ರಂದು ಮೋಟಾರ್ ಸೈಕಲಿನಲ್ಲಿ ಸುಂಟಿಕೊಪ್ಪದ ಪಡೆಗೆ ಹೋಗುತ್ತಿದ್ದಾಗ ಅವರ ಮುಂದುಗಡೆ ಹೋಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಯಾವುದೇ ಮುನ್ಸೂಚನೆ ಇಲ್ಲದೆ ಬಲಕ್ಕೆ ತಿರುಗಿಸಿ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಸವಾರ ಹಕೀಮ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಎನ್ ಪೂಣಚ್ಚ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ಮನನೊಂದ ಅವರು ದಿನಾಂಕ 26-11-2018 ರಂದು ವಿಷ ಸೇವಿಸಿ ಅಸ್ವತ್ಥಗೊಂಡಿದ್ದು ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದು ದಿನಾಂಕ 27-11-2018 ರಂದು ಅವರು ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ:

ಕುಶಾಲನಗರ ಠಾಣಾ ಸರಹದ್ದಿನ ಮುಳ್ಳುಸೋಗೆ ಗ್ರಾಮದ ಕಾವೇರಿ ಹೊಳೆಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತದೇಹವು ಪತ್ತೆಯಾಗಿದ್ದು ಈ ಸಂಬಂಧ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಉಪಾದ್ಯಕ್ಷರಾದ ತಾರಾನಾಥ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕರಿಮೆಣಸ ಕಳವು:

ಸುಂಟಿಕೊಪ್ಪ ಠಾಣಾ ಸರಹದ್ದಿನ ಕೊಡಗರಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಕಮಲಾಕ್ಷಿ ಎಂಬವರ ಮನೆಗೆ ದಿನಾಂಕ 27-11-2018 ರಂದು ಬೆಳಗ್ಗೆ 8-30 ರಿಂದ 2-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ನುಗ್ಗಿ ಮನೆಯೊಳಗಿನಿಂದ 30 ಕೆ.ಜಿ. ತೂಕದಷ್ಟು ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.