Crime News

 ಅಕ್ರಮ ಮರ ಸಾಗಾಟ ಪ್ರಕರಣ ದಾಖಲು:

ಕೊಡಗು ಜಿಲ್ಲೆಯ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಹೆಬ್ಬಲಸು ಮರವನ್ನು ಕಡಿದು ಲಾರಿಯಲ್ಲಿ ಸಾಗಾಟಮಾಡುತ್ತಿದ್ದುದನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ  ಡಿ.ಸಿ.ಐ.ಬಿ. ಪೊಲೀಸರು ಯಶಸ್ವಿಯಾಗಿದ್ದಾಗೆ.

ದಿನಾಂಕ 28-11-2018 ರಂದು ಜಿಲ್ಲಾ ಡಿ.ಸಿ.ಐ.ಬಿ. ಪೊಲೀಸರಿಗೆ ಬಂದ ಖಚಿತ ವರ್ತಮಾನದ ಮೇರೆಗೆ  ಪೊನ್ನಂಪೇಟೆ                                                                ಪೊಲೀಸ್ ಠಾಣಾ ಸರಹದ್ದಿನ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ವ್ಯಕ್ತಿಗಳು ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ವಿವಿಧ ಗಾತ್ರದ 10 ತುಂಡುಗಳನ್ನಾಗಿ ಮಾಡಿ ಈಚರ್ ಮಿನಿಲಾರಿ (ಸಂಖ್ಯೆ ಕೆಎಲ್-04-ಎಲ್-9371)ಯಲ್ಲಿ ತುಂಬಿಸಿ ಕೆಎ-37-ಎಂ-324ರ ಓಮ್ನಿ ವ್ಯಾನ್ನೊಂದಿಗೆ ಸಾಗಾಟಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಆರೋಪಿತರಿಂದ ಅಂದಾಜು 3.5 ಲಕ್ಷ ಮೌಲ್ಯದ ಹೆಬ್ಬಲಸು ಮರದ ನಾಟಾಗಳನ್ನು ತುಂಬಿದ ಲಾರಿಯನ್ನು ಹಾಗು ಓಮ್ನಿ ವ್ಯಾನನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.   ದಾಳಿಯ ಸಂದರ್ಭದಲ್ಲಿ ಆರೋಪಿಗಳು ಲಾರಿ ಹಾಗು ಓಮ್ನಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ತಪ್ಪಿಸಿಕೊಂಡಿದ್ದು, ತಪ್ಪಿಸಿಕೊಂಡ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಪೊಲೀಸ ಅಧೀಕ್ಷಕರಾದ ಡಾ: ಸುಮನ್ ಡಿ.ಪಿ. ಐಪಿಎಸ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಡಿ.ಸಿ.ಐ.ಬಿ. ನಿರೀಕ್ಷಕರಾದ ಎಂ.ಮಹೇಶ್ ರವರ ನೇತೃತ್ವದಲ್ಲಿ ಎಎಸ್ಐ ಕೆ.ವೈ. ಹಮೀದ್ ಸಿಬ್ಬಂದಿಗಳಾದ ಕೆ.ಎಸ್.ಅನಿಲ್ಕುಮಾರ್, ವಿ.ಜಿ.ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್ ಹಾಗು ಪೊನ್ನಂಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಬಿ.ಜಿ. ಮಹೇಶ್ ಸಿಬ್ಬಂದಿಗಳಾದ ಹೆಚ್.ವೈ. ಚಂದ್ರು, ಪ್ರಮೋದ್ಕುಮಾರ್, ಸುಗಂಧ ಹಾಗು ರಾಜೇಶ್ರವರು ದಾಳಿಯಲ್ಲಿ ಭಾಗವಹಿಸಿದ್ದರು.

ನೇಣು ಬಿಗಿದುಕೊಂಡು ಆತ್ಮಹತ್ಯೆ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಮೈಸೂರಮ್ಮ ನಗರದಲ್ಲಿ ವಾಸವಾಗಿರುವ ಶ್ರೀಮತಿ ಜ್ಯೋತಿ ಎಂಬವರ ಗಂಡ ಮಂಜು ಎಂಬವರು ದಿನಾಂಕ 28-11-2018 ರಂದು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಾಡಿ ಗ್ರಾಮದ ನಿವಾಸಿ ರಾಜೇಂದ್ರ ಎಂಬವರ ಮಗ 21 ವರ್ಷ ಪ್ರಾಯದ ಮಣಿಕಂಠ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 26-11-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು ಆತನ್ನು ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 28-11-2018 ರಂದು ಮೃತಪಟ್ಟಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಬೈಕಿಗೆ ಕಾರು ಡಿಕ್ಕಿ:

ವಿರಾಜಪೇಟೆ ನಗರದ ಮೊಗರಗಲ್ಲಿಯಲ್ಲಿ ವಾಸವಾಗಿರುವ ಬೈಕ್ ಮೆಕಾನಿಕ್ ಎಂ.ಎ. ಮುನೀರ್ ರವರು ದಿನಾಂಕ 27-11-2018 ರಂದು ಬುಲೆಟ್‍ ಮೋಟಾರ್‍ ಸೈಕಲಿನಲ್ಲಿ ವಿರಾಜಪೇಟೆ ನಗರದ ಕೂರ್ಗ್ ಅವಿನ್ಯೂಸೂಪರ್‍ ಸ್ಟೋರ್ಸ್ ಮುಂದುಗಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ನ್ಯಾನೋ ಕಾರನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್‍ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಎಂ.ಎ. ಮುನೀರ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.