Crime News

 ಅಕ್ರಮ ಮರಳು ಸಾಗಾಟ ಪತ್ತೆ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಡಿಸಿಐಬಿ ವಿಭಾಗದ ಪೊಲೀಸರು ಪತ್ತೆ ಹಚ್ಚಿ ಮರಳು ಮತ್ತು ಎರಡು ಲಾರಿಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ಗ್ರಾಮದ ಲಕ್ಷ್ಮಣತೀರ್ಥ ನದಿಯಿಂದ ಮರಳು ತೆಗೆದು ಮಿನಿಲಾರಿಗಳಲ್ಲಿ ತುಂಬಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ದಿನಾಂಕ 29-11-2018ರಂದು ಖಚಿತ ವರ್ತಮಾನದ ಮೇರೆ ಧಾಳಿ ನಡೆಸಿದ್ದು ಲಕ್ಷ್ಮಣತೀರ್ಥ ನದಿ ದಡದಲ್ಲಿ ಮರಳು ತುಂಬಿಸಿ ನಿಲ್ಲಿಸಲಾಗಿದ್ದ ಈಚರ್ ಮಿನಿ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ6716 ಹಾಗೂ ಮರಳು ತುಂಬಲಾಗುತ್ತಿದ್ದ ಈಚರ್ ಮಿನಿ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ6464ರ ವಾಹನಗಳನ್ನು ಮತ್ತು ಸ್ಥಳದಲ್ಲಿ ದೊರೆತ ಮರಳು, ಕಬ್ಬಿಣದ ಕೊಪ್ಪರಿಕೆ, ಬುಟ್ಟಿ ಗುದ್ದಲಿ ಸೇರಿದಂತೆ ವಾಹನ ಚಾಲಕರಾದ ಎಸ್ ಗುರುದತ್ತ  ಹಾಗೂ ಪಿ.ಯು ಪೊನ್ನಪ್ಪ ಮತ್ತು ಮರಳು ತುಂಬಿಸುತ್ತಿದ್ದ ವಿನೋದ್ ಹಾಗೂ ಲಂಬಾಣಿ ಮುತ್ತಣ್ಣರವರನ್ನು ವಶಕ್ಕೆ ಪಡೆಯಲಾಗಿದ್ದು ಮೇಲ್ಕಂಡವರ ವಿರುದ್ದ ಹಾಗೂ ಮರಳು ಗಣಿಗಾರಿಕೆ ನಡೆಸುತ್ತಿದ್ದ ಚಿಮ್ಮುಣೀರ ಹರೀಶ್ ಮತ್ತು ಮಿನಿ ಲಾರಿಗಳ ಮಾಲೀಕರಾದ ಎನ್.ಆರ್ ರಾಜ ಮತ್ತು ಅಪ್ಪಣ್ಣರವರ ವಿರುದ್ದ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಎಎಸ್ಐ ಕೆ.ವೈ ಹಮೀದ್, ಸಿಬ್ಬಂದಿಗಳಾದ ಕೆ.ಎಸ್ ಅನಿಲ್ ಕುಮಾರ್,ವಿ.ಜಿ ವೆಂಕಟೇಶ್,ಬಿ.ಎಲ್ ಯೊಗೇಶ್ ಕುಮಾರ್ ಕೆ.ಆರ್ ವಸಂತ ಎಂ.ಎನ್ ನಿರಂಜನ್ ಮತ್ತು ಶ್ರೀಮಂಗಲ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್, ಸಿಬ್ಬಂದಿಗಳಾದ ಸುಂದರೇಶ್ ಹಾಗೂ ಸಿದ್ದೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

ಹಲ್ಲೆ ಪ್ರಕರಣ

ದಿನಾಂಕ 27/11/2018ರಂದು ಮಕ್ಕಂದೂರು ನಿವಾಸಿ ಎಂ.ಎಸ್.ಶಿವಣ್ಣ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಅದೇ ಗ್ರಾಮದ ನಿವಾಸಿ ತೋರೇರ ಕಾರ್ಯಪ್ಪ ಎಂಬವರು ಶಿವಣ್ಣರವರು ಕಾರ್ಯಪ್ಪರವರಿಗೆ ಕೊಡಬೇಕಾದ ಹಣದ ಬಾಕಿಯನ್ನು ಕೇಳಿ ಅಶ್ಲೀಲ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 23/11/2018ರಂದು ಬೆಂಗಳೂರಿನ ಗೊರಗುಂಟೆ ಪಾಳ್ಯದ ನಿವಾಸಿ ಜೆ.ವಸಂತ ಕುಮಾರ್ ಎಂಬವರು ಅವರ ಸ್ನೇಹಿತರೊಡನೆ ಕೊಡಗಿಗೆ ಬಂದು ಕಾಲೂರು ಗ್ರಾಮದ ಮಾಂದಲಪಟ್ಟಿ ಬಳಿ ಬಂದು ಅಲ್ಲಿನ ನೀರಿನ ತೊರೆಯೊಂದರ ಬಳಿ ಕುಳಿತುಕೊಂಡು ಅವರ ಸ್ನೇಹಿತರಾದ ಭೀಮಯ್ಯ ಎಂಬವರನ್ನು ಕಾಯುತ್ತಿರುವಾಗ ಅಲ್ಲಿಗೆ ಬಂದ ಕಾಲೂರು ಗ್ರಾಮದ ಅರುಣ ಮತ್ತು ವಾಸು ಎಂಬವರು ವಸಂತ ಕುಮಾರ್‌ರವರನ್ನು ಕುರಿತು ವಿಚಾರಿಸಿ ಅವರನ್ನು ಬೈದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಮಡಿಕೇರಿ ನಗರದ ದೇಚೂರು ನಿವಾಸಿ ವಿ.ಆರ್.ರವಿಕುಮಾರ್ ಎಂಬವರಿಗೆ ದಿನಾಂಕ 23/11/2018ರಂದು ಯಾರೋ ಅನಾಮಧೇಯ ವ್ಯಕ್ತಿ ಕರೆ ಮಾಡಿ ರವಿಕುಮಾರ್‌ರವರ ಎಸ್‌ಬಿಐ ಬ್ಯಾಂಕಿನ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿರುವುದಾಗಿಯೂ ಅದನ್ನು ಸರಿಪಡಿಸಲು ಕಾರ್ಡ್‌ ಸಂಖ್ಯೆಯನ್ನು ನೀಡುವಂತೆ ಕೋರಿದ್ದು ರವಿಕುಮಾರ್‌ರವರು ನಿರಾಕರಿಸಿದ್ದಾರೆ. ನಂತರ ದಿನಾಂಕ 28/11/2018ರಂದು ರವಿಕುಮಾರ್‌ರವರು ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಅವರ ಖಾತೆಯಿಂದ ದಿನಾಂಕ 23/11/2018ರಂದು ಸುಮಾರು ರೂ.74,925/-ಗಳನ್ನು ಯಾರೋ ಆನ್‌ಲೈನ್ ಮೂಲಕ ಡ್ರಾ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆಯ ಹೊಲಮಾಳ ನಿವಾಸಿ ಕೋಡಿಮಲರ್ ಎಂಬವರ ತಂದೆ ಚಂದ್ರ ಕುಮಾರ್ ಎಂಬವರು ದಿನಾಂಕ 27/11/2018ರಂದು ಕೋಡಿಮಲರ್‌ರವರಿಗೆ ಕರೆ ಮಾಡಿ ತಾನು ಮಂಡ್ಯಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ಗೋಣಿಕೊಪ್ಪ ನಗರದ ಆರನೇ ವಿಭಾಗದ ನಿವಾಸಿ ರತ್ನವೇಲು ಎಂಬವರು ದಿನಾಂಕ 22/11/2018ರಂದು ಮನೆಯಲ್ಲಿ ಇಲಿಗೆ ಹಾಕುವ ವಿಷವನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದವರು ದಿನಾಂಕ 28/11/2018ರಂದು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/11/2018ರಂದು ವಿರಾಜಪೇಟೆ ನಿವಾಸಿ ಹೆಚ್‌.ಟಿ.ಲಕ್ಷ್ಮಣ ಎಂಬವರು ವಿರಾಜಪೇಟೆಯಿಂದ ಪೊನ್ನಂಪೇಟೆಗೆ ಅವರ ಬೈಕಿನಲ್ಲಿ ಹೋಗುತ್ತಿರುವಾಗ ಗೋಣಿಕೊಪ್ಪದ ಉಮಾ ಮಹೇಶ್ವರಿ ದೇವಸ್ಥಾನದ ಬಳಿ ಕಾನೂರಿನ ನಿವಾಸಿ ಯತೀಶ್‌ ಎಂಬವರು ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಕ್ಷ್ಮಣರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಕ್ಷ್ಮಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ಪೊನ್ನಂಪೇಟೆ ಬಳಿಯ ತಿತಿಮತಿ ಗ್ರಾಮದ ಚೇನಿಹಡ್ಲು ಹಾಡಿ ನಿವಾಸಿ ಪಣಿ ಎರವರ ರಾಮ ಎಂಬವರ ಮಗ ಉದಯ ಎಂಬಾತನು ದಿನಾಂಕ 27/11/2018ರಂದು ರಾತ್ರಿ ಮನೆಯಲ್ಲಿ ಮಲಗಿದ್ದು ಮಾರನೆ ದಿನ ಮನೆಯಲ್ಲಿ ಕಾಣದೇ ಇದ್ದ ಕಾರಣ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆನ್ನಲಾಗಿದೆ. ನಂತರ ದಿನಾಂಕ 29/11/2018ರಂದು ಅದೇ ಗ್ರಾಮದ ನಿವಾಸಿ ವಿಜಯ್ ಎಂಬವರು ಗದ್ದೆಯ ಬಳಿಯ ಕೆರೆಯಲ್ಲಿ ಯಾವುದೋ ಹೆಣ ತೇಲುತ್ತಿರುವುದಾಗಿ ತಿಳಿಸಿದ್ದು ಪಣಿಎರವರ ರಾಮರವರು ಹೋಗಿ ನೋಡಿದಾಗ ಅದು ಅವರ ಮಗ ಉದಯನಾಗಿದ್ದು ಆತನಿಗೆ ಮದ್ಯಪಾನ ಮಾಡಿದಾಗ ರಾತ್ರಿ ನಿದ್ರಯಿಂದ ಎದ್ದು ನಡೆಯುವ ಅಭ್ಯಾಸವಿದ್ದು ಅದೇ ರೀತಿ ರಾತ್ರಿ ವೇಳೆ ಹೋಗಿ ಕೆರೆಯಲ್ಲಿ ಬಿದ್ದು ಮೃತನಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಕಳವು, ಕೊಲೆ ಬೆದರಿಕೆ

ದಿನಾಂಕ 29/11/2018ರಂದು ಪೊನ್ನಂಪೇಟೆ ಬಳಿಯ ಕುಮಟೂರು ನಿವಾಸಿ ಲತಾ ಸುಗಂಧ ಎಂಬವರ ಕಾಫಿ ತೋಟದಲ್ಲಿನ ಸುಮಾರು 5 ಕ್ವಿಂಟಲ್ ಹಸಿ ಕಾಫಿಯನ್ನು ಕಮಲಾಕ್ಷಿ, ವಿಷ್ಣು ಮುತ್ತಣ್ಣ ಮತ್ತು ಇನ್ನಿತರರು ಸೇರಿಕೊಂಡು ಕುಯ್ದು ನಷ್ಟಪಡಿಸಿದ್ದು ಈ ಬಗ್ಗೆ ವಿಚಾರಿಸಿದ ಲತಾ ಸುಗಂಧರವರನ್ನು ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಹಲ್ಲೆ ಪ್ರಕರಣ

ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿ ಸುರೇಶ ಎಂಬವರಿಗೆ,ಅವರ ಮಗ ನಂದನ್, ಭಾವನಿರಂಜನ್  ಮತ್ತು ಅತ್ತೆ ರತ್ನಮ್ಮ ಎಂಬವರಿಗೆ ಅದೇ ಗ್ರಾಮದ ನಿವಾಸಿ ರವಿ ಎಂಬಾತನು ರಾಗಿ ಬೆಳೆಯನ್ನು ದನಗಳು ತಿಂದ ವಿಚಾರಕ್ಕೆ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಪ್ರಸನ್ನ, ನಿರಂಜನ್ ಮತ್ತು ನಾಗೇಗೌಡ ಎಂಬವರು ರವಿರವರ ಮೇಲೆ ಹಲ್ಲೆ ಮಾಡಿರುವುದಾಗಿ ರವಿರವರು ದೂರು ನೀಡಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.