Crime News

ವಿಷ ಸೇವಿಸಿದ್ದ ಮಹಿಳೆಯ ಸಾವು

ದಿನಾಂಕ 24-11-2018 ರಂದು ಮಡಿಕೇರಿ ತಾಲೋಕಿನ ಹುಲಿತಾಳ ಗ್ರಾಮದ ನಿವಾಸಿಯಾದ ದೇವಕ್ಕಿಯವರು ಮಗ ದಿನೇಶರವರು ಮೃತಪಟ್ಟಿದ್ದ ವಿಚಾರದಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರನ್ನು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದೇವಕ್ಕಿಯವರು ದಿನಾಂಕ 30-11-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 21-11-2018 ರಂದು ಹಾಸನ ಜಿಲ್ಲೆಯ ಮಲ್ಲಿಪಟ್ಟಣದ ನಿವಾಸಿಯಾದ ನಾಗೇಂದ್ರ ರವರ ಮಗ ಮನೋಜ್ ರವರು ರಾಯರಕೊಪ್ಪಲು ಗ್ರಾಮಕ್ಕೆ ಮಧುವೆ ಕಾರ್ಯಕ್ರಮಕ್ಕೆ ಹೋದವರು ಮಧುಕುಮಾರ್ ಎಂಬುವವರ ಸ್ಕೂಟಿಯಲ್ಲಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಸ್ಕೂಟಿಯನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಕೊಡ್ಲಿಪೇಟೆಯ ನೀರುಗುಂದ ಗ್ರಾಮದಲ್ಲಿ ರಸ್ತೆಯ ಉಬ್ಬು ಸಿಕ್ಕಿದಾಗ ತಕ್ಷಣ ಬ್ರೇಕ್ ಹಾಕಿದಾಗ ಹಿಂಬದಿ ಕುಳಿತ್ತಿದ್ದ ಮನೋಜ್ ರವರು ಬಿದ್ದು ಎಡಗೈನ ಮೂಳೆ ಮುರಿದು ಇತರ ಭಾಗಗಳಿಗೆ ಗಾಯಗಳಾಗಿದ್ದು ಈ ಬಗ್ಗೆ ದಿನಾಂಕ 30-11-2018 ರಂದು ಮನೋಜ್ ರವರ ತಂದೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ದಿನಾಂಕ 30-11-2018 ರಂದು ಮಡಿಕೇರಿ ತಾಲೋಕಿನ ಚೇಲವಾರ ಗ್ರಾಮದ ನಿವಾಸಿಯಾದ ಸುಬ್ಬಯ್ಯ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದ ಸಬಿಬುಲ್ ಎಂಬುವವರು ಚೆಯ್ಯಂಡಾಣೆಗೆ ಸಾಮಾನು ತರಲು ಹೋಗಿದ್ದಾಗ ರಂಜು, ದಿನೇಶ, ಶಂಭು ಮತ್ತು ಕಾರ್ಯಪ್ಪನವರು ಸುಬ್ಬಯ್ಯನವರ ಮನೆಯಲ್ಲಿ ಏಕೆ ಕೆಲಸ ಮಾಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸಿದ್ದು, ವಿಚಾರ ತಿಳಿದು ಸುಬ್ಬಯ್ಯನವರು ಚೆಯ್ಯಂಡಾಣೆಗೆ ಹೋದಾಗ ಅವರಿಗೂ ಸಹಾ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಸ್ಥಾನದ ಹುಂಡಿ ಕಳುವಿಗೆ ಯತ್ನ

ದಿನಾಂಕ 29-11-2018 ರಂದು ಸುಂಟಿಕೊಪ್ಪ ಠಾಣೆಯ ಸಿಬ್ಬಂದಿಯಾದ ಪುನಿತ್ ಮತ್ತು ಪ್ರಮೋದ್ ರವರು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಮದ್ಯರಾತ್ರಿ 12-30 ಗಂಟೆಗೆ ಮಾದಾಪುರ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಕಡೆಯಿಂದ ಶಬ್ದ ಬರುತ್ತಿದ್ದುದ್ದನ್ನು ಕೇಳಿ ಹೋಗಿ ನೋಡಲಾಗಿ ಸುಂಟಿಕೊಪ್ಪ ನಗರದ ಮಧುರಮ್ಮ ಬಡಾವಣೆಯ ನಿವಾಸಿ ಪ್ರಕಾಶ್ ಎಂಬುವವರು ಭಂಡಾರ ಪೆಟ್ಟಿಗೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದವನನ್ನು ಹಿಡಿದುಕೊಂಡು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾ ಗಿರುತ್ತದೆ.

ಅಪಘಾತ ಪ್ರಕರಣ ವ್ಯಕ್ತಿಯ ದುರ್ಮರಣ

ದಿನಾಂಕ 29-11-2018 ರಂದು ಕುಶಾಲನಗರದ ಗುಮ್ಮನಕೊಲ್ಲಿಯ ನಿವಾಸಿ ಆಸಿಕ್ ರವರು ತನ್ನ ಪತ್ನಿ ಮುನ್ಸಿರಾ ಮತ್ತು ಬಾವ ಅಸ್ಗರ್ ರವರೊಂದಿಗೆ ಮಾದಾಪುರಕ್ಕೆ ಹೋಗಿದ್ದವರು ಆಟೋ ರಿಕ್ಷಾದಲ್ಲಿ ಕುಶಾಲನಗರಕ್ಕೆ ಹೋಗುತ್ತಿರುವಾಗ ಬಸವನಹಳ್ಳಿ ಗ್ರಾಮದ ಆನೆಕಾಡು ಫಾರೆಸ್ಟ್ ಹತ್ತಿರ ಇರುವ ಬ್ರೈಟ್ ಹೊಟೆಲ್ ಹತ್ತಿರ ತಲುಪುವಾಗ ಕುಶಾಲನಗರದ ಕಡೆಯಿಂದ ಹಾಸನ ಜಿಲ್ಲೆಯ ಅರಕಲಗೋಡುವಿನ ನಿವಾಸಿಯಾದ ಮಡಿಕೇರಿ ನಗರ ಸಭೆಗೆ ಸೇರಿದ ಟ್ರ್ಯಾಕ್ಟರ್ ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರು ಎಂಬುವವರು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ಚಾಲಕ ಚಂದ್ರುರವರು ಗಾಯಗೊಂಡು ಮೃತಪಟ್ಟಿದ್ದು, ಆಟೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.