Crime News

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ನಗರ ಠಾಣಾ ಸರಹದ್ದಿನ ಮಿಷನ್ ಕಾಂಪೌಂಡ್ ನಿವಾಸಿಗಳಾದ  ಪ್ರೇಮ್ ಕುಮಾರ್‍ ಹಾಗು ಶ್ರೀಮತಿ ಐಡೋರಾ ಪ್ರಕಾಶ್, ರಾಯ್ ಆಸ್ವಾಲ್ಡ್‍, ಸಚ್ಚಿದಾನಂದ, ಪ್ರಪುಲ್ಲಾ ರಂಜನಿ ಮತ್ತು ರೇಖಾರಾಯ್ ರವರು ದಿನಾಂಕ 2-12-2018 ರಂದು 10-30 ಗಂಟೆಗೆ ಚರ್ಚ್‍ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುತ್ತಿದ್ದಾಗ  ಪ್ರೇಮ್ ಕುಮಾರ್‍ ಮತ್ತು  ಶ್ರೀಮತಿ ಐಡೋರಾ ಪ್ರಕಾಶ್, ರಾಯ್ ಆಸ್ವಾಲ್ಡ್‍, ಸಚ್ಚಿದಾನಂದ, ಪ್ರಪುಲ್ಲಾ ರಂಜನಿ ಮತ್ತು ರೇಖಾರಾಯ್     ರವರುಗಳು ಪರಸ್ಪರ ಜಗಳವಾಡಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಹಲ್ಲೆ ಮಾಡಿಕೊಂಡಿರುವ ಬಗ್ಗೆ ಎರಡು ಕಡೆಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ವ್ಯಾನ್ ಡಿಕ್ಕಿ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪೆರಾಜೆ ಗ್ರಾಮದ ನಿವಾಸಿ ಬಿ.ಆರ್‍.ಸುರೇಶ್ ರವರು ದಿನಾಂಕ 01-12-2018 ರಂದು ಪೆರಾಜೆ ಗ್ರಾಮಕ್ಕೆ ಹೋಗಲು ರಸ್ತೆದಾಟುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಮಾರುತಿ ಓಮ್ನಿ ವ್ಯಾನ್‍ ಅವರಿಗೆ ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂದ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗಕ್ಕೆ ಅಕ್ರಮ ಪ್ರವೇಶ, ಅವಾಚ್ಯ ನಿಂದನೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನಿವಾಸಿ ಎ.ಪಿ. ಉದಯಕುಮಾರ್‍ ಎಂಬವರಿಗೆ ಸೇರಿದ ಜಾಗಕ್ಕೆ ಆರೋಪಿಗಳಾದ ವಿನು ಮಹೇಶ್, ಕೆ.ಕೆ. ಮೋಹನ್, ಎನ್‍.ಕೆ. ಶಶಿಧರ್‍, ಕೃಷ್ಣಕುಟ್ಟಿ, ಪ್ರಸಾದ್‍ ಮತ್ತು ತಮ್ಮು ಪೂವಯ್ಯ ರವರುಗಳು ಸೇರಿ ಅಕ್ರಮ ಪ್ರವೇಶ ಮಾಡಿ, ಅಕ್ರಮವಾಗಿ 1500 ಮೀ. ಉದ್ದಕ್ಕೆ 3 ಅಡಿ ಆಳದ ಕಾಲುವೆ ತೆಗೆದು ನೆಟ್‍ವರ್ಕ್ ಕೇಬಲ್‍ನ್ನು ಅಳವಡಿಸಿ ನಷ್ಟಪಡಿಸಿದ್ದು ಅಲ್ಲದೆ ಇದನ್ನು ವಿಚಾರಣೆ ಮಾಡಿದ ಎ.ಪಿ.ಉದಯ್‍ಕುಮಾರ್‍ ರವರನ್ನು ಅವಾಚ್ಯ ಶಬ್ದಗಳಿಂದಿ ನಿಂದಿಸಿದ್ದು ಈ ಸಂಬಂಧ ಸದರಿಯವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಪ್ರಕರಣ:

ವಿರಾಜಪೇಟೆ ನಗರ ಠಾಣಾ ಸರಹದ್ದಿನ ಶಂತಾ ಥಿಯೇಟರ್ ಬಳಿ ವಾಸವಾಗಿರುವ  ಜಿ.ಕೆ. ಗಣೇಶ್‍ ಎಂಬವರು ವ್ಯಾಪಾರದ ನಿಮಿತ್ತ ವಿ.ಹ್ಯಾರೀಸ್ ಎಂಬವರ ಬ್ಯಾಂಕ್ ಖಾತೆಗೆ ಒಟ್ಟು 44,50,000 ರೂ. ಗಳನ್ನು ಸಂದಾಯ ಮಾಡಿದ್ದು ಅದರಲ್ಲಿ 23,00,000/- ರೂ. ಗಳನ್ನು ವಾಪಾಸು ಕೊಡದೇ ವಂಚಿಸಿರುತ್ತಾರೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ತೋಟಕ್ಕೆ ಅಕ್ರಮ ಪವೇಶ, ಹಲ್ಲೆ:

ವಿರಾಜಪೇಟೆ ತಾಲೋಕು ನಿಟ್ಟೂರು ಗ್ರಾಮದ ನಿವಾಸಿ ಶ್ರೀಮತಿ ಕಮಲಾಕ್ಷಿ ಎಂಬವರಿಗೆ ಸೇರಿದ ಜಾಗಕ್ಕೆ ಕಲ್ಲಂಗಡ ಲತಾ, ಪ್ರವೀಣ್ ಪೂಜಾರಿ, ಸುಗಂಧ, ಚೋಂದಮ್ಮ ಮತ್ತು ಇತರರು ಸೇರಿ ಅಕ್ರಮ ಪ್ರವೇಶ ಮಾಡಿ ಕಾಫಿ ಮತ್ತು ಅಡಿಕೆಯನ್ನು ಕಳ್ಳತನ ಮಾಡಿದ್ದು ಇದನ್ನುವಿಚಾರಿಸಿದ ಶ್ರೀಮತಿ ಕಮಲಾಕ್ಷಿ ರವರ ಮೇಲೆ ಮೆಲ್ಕಾಣಿಸಿದವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕಯಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ನಿವಾಸಿ ಕೆ.ವಿ.ವಾಸು ಎಂಬವರ ಮಗ ಸಚ್ಚಿದಾನಂದ ಎಂಬವರು ದಿನಾಂಕ ಗೋಣಿಕೊಪ್ಪದಿಂದ ಬಿಟ್ಟಂಗಾಲದ ಕಡೆಗೆ ಬರುತ್ತಿದ್ದಾಗ ವಿರಾಜಪೇಟೆ ಕಡೆಯಿಂದ ಹೋಗುತ್ತಿದ್ದ ಕಾರು ಸದರಿ ಮೋಟಾರು ಸೈಕಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಚ್ಚಿದಾನಂದರವರು ಗಾಯಗೊಂಡಿದ್ದು ಸದರಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.