Crime News

ಹಲ್ಲೆ ಪ್ರಕರಣ

ದಿನಾಂಕ 4-12-2018 ರಂದು ಮಡಿಕೇರಿ ತಾಲೋಕಿನ ಬಿಳಿಗೇರಿ ಗ್ರಾಮದ ನಿವಾಸಿಯಾದ ಚಿಣ್ಣಪ್ಪನವರ ತೋಟಕ್ಕೆ ಸೀತಾರಾಮರವರು ನುಗ್ಗಿ ಕಾಫಿ ಮತ್ತು ಅಡಿಕೆ ಗಿಡಗಳನ್ನು ಕಡಿಯುತ್ತಿದ್ದವರನ್ನು ವಿಚಾರಿಸಿದಾಗ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹುಡುಗ ಕಾಣೆ

ವಿರಾಜಪೇಟೆ ತಾಲೋಕಿನ ಗೋಣಿಕೊಪ್ಪಲುವಿನ ಬಾಳಾಜಿ ಗ್ರಾಮದ ನಿವಾಸಿ ಬೋಜ ಎಂಬುವವರ ಮಗ ಸಿದ್ದು ಎಂಬುವವರು ಕಾಣೆಯಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

ಸೋಮವಾರಪೇಟೆ ತಾಲೋಕಿನ ಕೂಡಿಗೆ ಗ್ರಾಮದ ನಿವಾಸಿಯಾದ ರಾಜಶೇಖರ್ ಎಂಬುವವರ ಮಗ ಕಿರಣ್ ಕುಮಾರ್ ಎಂಬುವವರು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 4-12-2018 ರಂದು ಕೂಡಿಗೆಯ ಹಳೆ ಸೇತುವಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

ಸೋಮವಾರಪೇಟೆ ತಾಲೋಕಿನ ಕುಶಾಲನಗರದ ಗೊಂದಿಬಸವನ ಹಳ್ಳಿಯಲ್ಲಿರುವ ತಾಯಮ್ಮ ಎಂಬುವವರು ಸಾಲ ಮಾಡಿಕೊಂಡಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 4-12-2018 ರಂದು ತಾಯಮ್ಮ ಮತ್ತು ಅವರ ಮಗಳು ದಿವ್ಯಶ್ರೀ ಎಂಬುವವರು ಕಲ್ಲು ಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹತ್ಯೆ ಪ್ರಕರಣ

ವಿರಾಜಪೇಟೆ ತಾಲೋಕಿನ ಕೆ ಬಾಡಗ ಗ್ರಾಮದ ನಿವಾಸಿಯಾದ ಪಣಿಯರವರ ರವಿ ಎಂಬುವವರು ದಿನಾಂಕ 02-12-2018 ರಂದು ತನ್ನ ಪತ್ನಿ ಬಾಗು ಹಾಗೂ ತನ್ನ 1 ½ ವರ್ಷದ ಮಗುವನ್ನು ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದು, ದಿನಾಂಕ 03-12-2018 ರಂದು ಮಗು ಚಿಕಿತ್ಸೆ ಪಡೆಯುತ್ತಿರುವಾಗ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಬಗ್ಗೆ  ಮಗುವಿನ ತಾಯಿ ಪಂಜರಿಯರವರ ಬಾಗುರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.