Crime News

ಹಲ್ಲೆ ಪ್ರಕರಣ ದಾಖಲು:

     ಮಡಿಕೇರಿ ನಗರ ಠಾಣಾ ಸರಹದ್ದಿನ ಮುಳಿಯಾ ಲೇಔಟ್, ವಿದ್ಯಾನಗರದ ನಿವಾಸಿ ರಾಜು ಎಂಬವರು ದಿನಾಂಕ 16-4-2018 ರಂದು ರಾತ್ರಿ ಸಮಯ 8-15 ಗಂಟೆಗೆ ಮನೆಗೆ ಹೋಗುತ್ತಿದ್ದಾಗ ಆರೋಪಿಗಳಾದ ವಿನೋದ್, ಮೋನಿಶ್, ಯತೀಶ್ ರವರುಗಳು ದಾರಿ ತಡೆದು ದಾರಿಯಲ್ಲಿ ತಿರುಗಾಡುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಫಿರ್ಯಾದಿ ಮೇಲೆ ಕೈಗಳಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ: 

    ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಎಂ. ರಾಹಿಬ ಎಂಬವರ ಪತಿ ಮುಬೀನ್ ಎಂಬವರು ದಿನಾಂಕ 1-12-2017 ರಂದು ಬೆಳಿಗ್ಗೆ ಪಿರಿಯಾಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು: 

     ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ಗೂಡುಗದ್ದೆ ನಿವಾಸಿ ಚೌರಿಯಪ್ಪ ಎಂಬವರು ದಿನಾಂಕ 16-4-2018 ರಂದು ಸಂಜೆ ಗೂಡುಗದ್ದೆ ಕಾವೇರಿ ಹೋಳೆಗೆ ಸ್ನಾನಮಾಡಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮೃತರ ಪತ್ನಿ ಶ್ರೀಮತಿ ರೋಸಿ ಅಲ್ಫೋನ್ಸ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಅಸ್ವಬಾವಿಕ ಸಾವು: 

     ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡಬ್ಬೂರು ಗ್ರಾಮದ ನಿವಾಸಿ ಎ.ಡಿ. ಜೋಯಪ್ಪ ಎಂಬವರು ತಮ್ಮ ಮನೆಯ ಮುಂದುಗಡೆ ಮೃತಪಟ್ಟಿರುವುದು ಕಂಡು ಬಂದಿದ್ದು ಇದು ದಿನಾಂಕ 16-4-2018ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 17-4-2018ರ ಬೆಳಗ್ಗೆ 8-00 ಗಂಟೆಯ ನಡುವೆ ನಡೆದಿದ್ದು ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: 

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಆಲೂರು ಸಿದ್ದಾಪುರ ಗ್ರಾಮದ ಹೆಚ್.ಸಿ. ರಾಜಯ್ಯ ಎಂಬವರು ಸುಮಾರು ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ನೊಂದು ದಿನಾಂಕ 16-4-2018 ರಂದು ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಅವರನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಜಿತ್ಸೆ ಫಲಕಾರಿಯಾಗದೆ ಸದರಿ ಹೆಚ್.ಸಿ. ರಾಜಯ್ಯನವರು ಮೃತಪಟ್ಟಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಸ್ಪರ ಹಲ್ಲೆ, 2 ಪ್ರತ್ಯೇಕ ಪ್ರಕರಣ ದಾಖಲು: 

     ದಿನಾಂಕ 17-4-2018 ರಂದು ಸಂಜೆ 17-30 ಗಂಟೆಗೆ ಮಾದಾಪಟ್ಟಣ ಗ್ರಾಮದಲ್ಲಿ ಸರಕಾರದ ವತಿಯಿಂದ ಚರಂಡಿ ದುರಸ್ಥಿ ಕೆಲಸ ನಡೆಯುತ್ತಿದ್ದು ಗುತ್ತಿಗೆದಾರು ಮಾದಾಪಟ್ಟಣದ ನಿವಾಸಿಗಳಾದ ಶ್ರೀಮತಿ ಗೀತಾರವರಿಗೆ ಮನೆಯ ಮುಂದಿನ ಶೀಟುಗಳನ್ನು ತೆರವುಗೊಳಿಸಲು ತಿಳಿಸಿದ್ದು, ಅದಕ್ಕೆ ನಾಳೆ ಸದರಿ ಶೀಟ್ ಗಳನ್ನು ತೆರವುಗೊಳಿಸಿಕೊಡಲಾಗುವುದೆಂದು ತಿಳಿಸಿದ್ದು, ಈ ವಿಚಾರದಲ್ಲಿ ಎರಡು ಕಡೆಯವರಿಗೆ ಜಗಳವಾಗಿ ಪರಸ್ಪರ ಹಲ್ಲೆ ಮಾಡಿದ್ದು ಈ ಸಂಬಂಧ ಶ್ರೀಮತಿ ಗೀತಾರವರು ರಾಜು, ಮಂಜು ಭಾಗ್ಯರವರು ಹಲ್ಲೆ ನಡೆಸಿದ ಬಗ್ಗೆ ಹಾಗು ಶ್ರೀಮತಿ ಶೃತಿರವರು ಮಾದೇಶ, ಮಧು, ಪ್ರಮೋದ್, ಪ್ರವೀಣ, ಗೀತಾ, ಮಾಲಾ ಭವ್ಯರವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಕುಶಾಲನಗರ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.