Crime News

ಕಾರ್ಯಕ್ರಮದ ಜಾಗಕ್ಕೆ ಅತಿಕ್ರಮ ಪ್ರವೇಶ:

ದಿನಾಂಕ 8-12-2018 ರಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ವತಿಯಿಂದ ಪ್ರತಿಭಟನಾ ಸಭೆಯನ್ನು ಏರ್ಪಡಿಸಿದ್ದು, ಮಡಿಕೇರಿ ನಗರದ ಗಾಂಧೀ ಮೈದಾನದಲ್ಲಿ ಪೆಂಡಾಲ್ ವ್ಯವಸ್ಥೆಯನ್ನು ಮಾಡಿದ್ದು, ಸದರಿ ಕಾರ್ಯಕ್ರಮ ನಡೆಯುವ ಜಾಗಕ್ಕೆ  ಮನು ಮುತ್ತಪ್ಪ ಹಾಗು ಇತರೆ 8 ಜನರು ಸೇರಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತ  ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುತ್ತಾರೆಂದು ಕೊಡಗು ಮಾರಕ ಯೋಜನೆ ವಿರೋದಿ ವೇದಿಕೆ ಅದ್ಯಕ್ಷರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಾಚ್ಯ ನಿಂದನೆ ಕೊಲೆ ಬೆದರಿಕೆ:

ದಿನಾಂಕ 8-12-2018 ರಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆಯ ವತಿಯಿಂದ ಪ್ರತಿಭಟನಾ ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಗೆ ಮಡಿಕೇರಿ ತಾಲೋಕು ಐವತ್ತೊಕ್ಲು ಗ್ರಾಮದ  ಕೆ.ಬಿ. ಬೋಪಣ್ಣ ಎಂಬವರು ಹಾಜರಿದ್ದು  ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಮೇಜರ್ ನಂಜಪ್ಪ ಹಾಗು ಇತರೆ 9 ಜನರು ಸೇರಿ ಕೆ.ಬಿ. ಬೋಪಣ್ಣರವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಐಟಿಐ ವಿದ್ಯಾರ್ಥಿಗಳಿಬ್ಬರ ಸಾವು:

ದಿನಾಂಕ 7-12-2018 ರಂದು ಮಡಿಕೇರಿ ತಾಲೋಕು ಹೆರವನಾಡು ಗ್ರಾಮದ ನಿವಾಸಿ ಕೊಕ್ಕಲೇ ಮುತ್ತಪ್ಪ ಎಂಬವರ ಮಗ ರಕ್ಷಿತ್, ಮದೆನಾಡು ಗ್ರಾಮದ ಪೊನ್ನಪ್ಪನವರ ಮಗರ ಯಶ್ವಂತ್ ರವರು ಬೈಕಿನಲ್ಲಿ ಗಾಳಿಬೀಡು ಗ್ರಾಮದ ಕೂಟುಹೊಳೆಗೆ ಸ್ನೇಹಿತರೊಂದಿಗೆ ಹೋಗಿದ್ದು, ದಿನಾಂಕ 8-12-2018 ರಂದು ಸದರಿ ವಿದ್ಯಾರ್ಥಿಗಳಿಬ್ಬರ ಶವಗಳು ನೀರಿನಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಕೊಕ್ಕಲೇ ಮುತ್ತಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಗ್ರಾಮದಲ್ಲಿ ದಿನಾಂಕ 8-12-2018 ರಂದು ಬೇಟೋಳಿ ಗ್ರಾಮದವರಾದ ಶ್ರೀಮತಿ ಸಿಂಧು ರವರು ತನ್ನ ಗಂಡ ಮಧುಸೂದನ್ ರವರಿಗೆ ಊಟ ಕೊಟ್ಟು ಬರಲು ಹೋಗಿದ್ದು ಅಲ್ಲಿಂದ ವಿರಾಜಪೇಟೆಗೆ ತುಳಸಿ ಮುರುಗೇಶ್ ಎಂಬವರ ಕಾರಿಯಲ್ಲಿ ಹೊರಡುತ್ತಿದ್ದಾಗ ರಸ್ತೆಯಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವಾಹನವನ್ನು ಸೈಡಿಗೆ ಹಾಕುವಂತೆ ಅದರ ಚಾಲಕ ಬಾಬು ಎಂಬವರೊಂದಿಗೆ ಹೇಳಿದ ಕಾರಣಕ್ಕೆ  ಬಾಬು ಹಾಗು ಅವರೊಂದಿಗೆ ಇದ್ದ ಶಿಬು ಸಹ ಇದ್ದು ಎರಡು ಕಡೆಯವರು ಪರಸ್ಪರ ಜಗಳ ಮಾಡಿಕೊಂಡು ಪರಸ್ಪರ ಹಲ್ಲೆ ನಡೆಸಿದ್ದು  ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಂಪೆನಿಯೊಂದರ ವಸ್ತುಗಳನ್ನು ನಕಲಿ ಮಾಡಿ ಮಾರಾಟ:

ಸ್ಟೀಫನ್ ರಾಜ್, ತನಿಖಾ ಅಧಿಕಾರಿ,  EIPR(India) Pvt Ltd. Bangalore  ಇವರು EPIR INDIA Pvt Ltd. ಕಂಪೆನಿಯ ಅಧಿಕೃತ ಪ್ರತಿನಿಧಿಯಾಗಿದ್ದು, ಈ ಕಂಪೆನಿಯು JSW STEEL PRODUCTS ನ್ನು ತಯಾರು ಮಾಡುತ್ತಿದ್ದು ಸದರಿಯವರು ಕಂಪೆನಿಯು ತಯಾರಿಸಿರುವ ಸರ್ವೆ, ಪರಿಶೀಲನೆ, ಹಾಗೂ ವರಧಿಗಳನ್ನು ಪರಿಶೀಲಿಸಿ, ಹಾಗೂ ಈ ವಸ್ತುಗಳ ಬಗ್ಗೆ ನಿಗಾ ವಹಿಸುವ ಜವಾಬ್ದಾರಿಯನ್ನು ಹೊಂದಿದ್ದು ಸದರಿ ಕಂಪೆನಿಯು ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಪಡೆದಿರುತ್ತದೆ. ಕಂಪೆನಿಗೆ ಸೇರಿದ ಎಲ್ಲಾ ಮುದ್ರೆಗಳು, ಮೊಹರುಗಳು ಹಾಗೂ ಉತ್ಪಾದನೆಗಳ ಬಗ್ಗೆ ಕಂಪೆನಿಗೆ ಸೇರಿದ್ದು,COPYRIGHT ACT ಗೆ ಒಳಪಟ್ಟಿರುತ್ತದೆ. ಹೀಗಿರುವಾಗ ಕೊಡಗು ಜಿಲ್ಲೆಯ ಕುಶಾಲನಗರದ ಕೂಡ್ಲೂರು ಕೈಗಾರಿಕಾ ಪ್ರದೇಶದ ನಂ. 30 ರಲ್ಲಿರುವ ಬಿಎಸ್.ಆರ್ ರೂಫೀಂಗ್ಸ್ ಕಂಪೆನಿಯ ಮಾಲಿಕರು EPIR INDIA Pvt Ltd. ಕಂಪೆನಿಯ ಹೆಸರಿನಲ್ಲಿ ನಕಲಿ ಸೀಲು ಮತ್ತು STEEL SHEET ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಕಂಪೆನಿಗೆ ಮತ್ತು ಗ್ರಾಹಕರಿಗೆ ಮೋಸ ಮಾಡುತ್ತಿದ್ದು, ಕಂಪೆನಿಯ ಹೆಸರಿನಲ್ಲಿ ನಕಲಿ ಸೀಲು ಹಾಗೂ ಹೆಸರನ್ನು ಬಳಸಿಕೊಂಡು ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.