Crime News

ವಂಚನೆ ಪ್ರಕರಣ

         ದಿನಾಂಕ 11-12-2018 ರಂದು ಮಡಿಕೇರಿ ನಗರದ ನಿವಾಸಿಯಾದ ಜಗದೀಶ್ ಎಂಬುವವರಿಗೆ ಯಾರೋ ಅಪರಿಚಿತರು ಕರೆ ಮಾಡಿ ಎಸ್.ಬಿ.ಐ ಬ್ಯಾಂಕ್ ನವರು ಎಂದು ಹೇಳಿ ಬ್ಯಾಂಕ್ ಖಾತೆ ಮಾಹಿತಿಯನ್ನು ಪಡೆದುಕೊಂಡು ಅವರ ಖಾತೆಯಿಂದ 1,20,000 ರೂ ಹಣವನ್ನು ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ        

     ಮಡಿಕೇರಿ ನಗರದ ಮುನೇಶ್ವರ ದೇವಾಲಯದ ಬಳಿ ಇರುವ ಮುನೇಶ್ವರ ಸಮುದಾಯ ಭವನಕ್ಕೆ ತಡೆಗೋಡೆಯನ್ನು ಕಟ್ಟುವ ಸಲುವಾಗಿ ಸೀಮೆಂಟ್ ಚೀಲಗಳು,ಕಬ್ಬಿಣದ ಕಂಬಿಗಳು ಮತ್ತು ಬೈಂಡಿಂಗ್ ವಯರ್ ಗಳನ್ನು ಸಮುದಾಯ ಭವನದ ಮುಂದಿನ ಜಾಗದಲ್ಲಿ ಕಂಟ್ರಾಕ್ಟರ್ ಶಿವಾನಂದರವರು ಶೇಖರಿಸಿಟ್ಟಿದ್ದು, ದಿನಾಂಕ 10-12-2018 ರ ಯಾರೋ 12 ಸಿಮೆಂಟ್ ಚೀಲಗಳನ್ನು, 20 ಕಬ್ಬಿಣದ ಕಂಬಿಗಳನ್ನು ಹಾಗೂ 5 ಕೆ ಜಿ ಬೈಂಡಿಂಗ್ ವಯರ್ ಗಳನ್ನು ಕಳವು ಮಾಡಿದ್ದು ಈ ಬಗ್ಗೆ ಶಿವಾನಂದರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

     ದಿನಾಂಕ 11-12-2018 ರಂದು ಮಡಿಕೇರಿ ನಗರದ ನಿವಾಸಿ ಶಿವಪ್ರಸಾದ್ ಎಂಬುವವರು ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿದಾಗ 26,500 ರೂ ಇದ್ದು, ಸ್ವಲ್ವ ಸಮಯದ ನಂತರ ಪರಿಶೀಲಿಸಲಾಗಿ ಖಾತೆಯಲ್ಲಿ 13,124 ರೂ ಮಾತ್ರ ಇರುವುದು ಕಂಡು ಬಂದಿದ್ದು, ಯಾರೋ ವ್ಯಕ್ತಿಗಳು ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದುಕೊಂಡು ವಂಚಿಸಿರುವ ಬಗ್ಗೆ ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

     ದಿನಾಂಕ 11-12-2018 ರಂದು ಸಿದ್ದಾಪುರ ಕೂಡುಗದ್ದೆಯ ನಿವಾಸಿಯಾದ ಚಂದ್ರಶೇಖರ ಎಂಬುವವರು ಟ್ರ್ಯಾಕ್ಟರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಟ್ರ್ಯಾಕ್ಟರಿನ ಟ್ರೇಲರ್ ನ ಹುಕ್ ಕಳಚಿ ನಡೆದುಕೊಂಡು ಹೋಗುತ್ತಿದ್ದ ಅರುಳಪ್ಪನವರಿಗೆ ತಾಗಿ ಗಾಯವಾಗಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಹಲ್ಲೆ ಪ್ರಕರಣ

ದಿನಾಂಕ 11-12-2018 ರಂದು ಸೋಮವಾರಪೇಟೆಯ ಕುಂಬಾರಗಡಿಗೆಯ ನಿವಾಸಿ ಸತೀಶ್ ರವರು ಮನೆಯ ಪಕ್ಕದಲ್ಲಿರುವ ನಲ್ಲಿಯಲ್ಲಿ ನೀರನ್ನು ಹಿಡಿಯುತ್ತಿರುವಾಗ ಪಕ್ಕದ ವಾಸಿ ತಿಮ್ಮಯ್ಯನವರು ನೀರಿನ ವಿಚಾರದಲ್ಲಿ ಜಗಳ ತೆಗೆದು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು, ಗಾಯಾಳು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

     ವಿರಾಜಪೇಟೆ ತಾಲೋಕಿನ ಅಮ್ಮತ್ತಿ ನಗರದ ನಿವಾಸಿಯಾದ ಲಕ್ಷ್ಮಣರವರು ಅದೇ ಗ್ರಾಮದವರಾದ ರವಿಯವರ ಪತ್ನಿ ಗೀತಾರವರಿಗೆ ಸಾಲವಾಗಿ ಹಣವನ್ನು ನೀಡಿದ್ದು, ಸಾಲವನ್ನು ಹಿಂತಿರುಗಿಸದೇ ಇದ್ದು, ಇದೇ ವಿಚಾರದಲ್ಲಿ ರವಿಯ ಅಣ್ಣ ಸುಬ್ರಮಣಿಯವರು ದಿನಾಂಕ 5-12-2018 ರಂದು ಜಗಳ ಮಾಡಿ ಕಲ್ಲಿನಿಂದ ತಲೆಗೆ ಹೊಡೆದು ಗಾಯಪಡಿಸಿದ್ದು, ಈ ಬಗ್ಗೆ ದಿನಾಂಕ 11-12-2018 ರಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.