Crime News

ಕಳವು ಪ್ರಕರಣ

             ದಿನಾಂಕ 14-12-2018 ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್ಐ ರವರಾದ ಚೇತನ್ ರವರು ರಾತ್ರಿ ಗಸ್ತು ಮಾಡುತ್ತಿರುವಾಗ ಕಾಟಕೇರಿ ಜಂಕ್ಷನ್ ಬಳಿ ಬಸ್ಸು ತಂಗುದಾಣದಲ್ಲಿ ಅನುಮಾನಾಸ್ಪದವಾಗಿ ಕಂಡ ಬಂದ ಮೈಸೂರಿನವರಾದ ರಹೀಂ, ಸಲೀಂ ಮತ್ತು ಸಮೀರ್ ಪಾಷಾ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಎರಡು ಮೊಬೈಲ್ ಫೋನ್ ಗಳು ಹಾಗೂ 8,200 ರೂಗಳನ್ನು ವಶಪಡಿಸಿಕೊಂಡು ವಿಚಾರಿಸಿಲಾಗಿ ಮೊಬೈಲ್ ಫೋನ್ ಹಾಗೂ ಹಣವನ್ನು ಮಂಗಳೂರಿನ ಬಸ್ಸು ನಿಲ್ದಾಣದಲ್ಲಿ ದಿನಾಂಕ 13-12-2018 ರಂದು ಕಳ್ಳನ ಮಾಡಿರುವುದಾಗಿ ತಿಳಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಯಗೊಂಡಿದ್ದ ವ್ಯಕ್ತಿಯ ಸಾವು

           ದಿನಾಂಕ 08-12-2018 ರಂದು ಅಮ್ಮತ್ತಿ ನಗರದ ನಿವಾಸಿ 80 ವರ್ಷ ಪ್ರಾಯದ ಲಕ್ಷ್ಮಣ ಎಂಬುವವರು ನಡೆದುಕೊಂಡು ಹೋಗುತ್ತಿರುವಾಗ ಜಾರಿ ಬಿದ್ದು ತಲೆಗೆ ಗಾಯವಾಗಿದ್ದು, ಬೆಂಗಳೂರಿನ ನಿಮಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿ ವಾಪಾಸ್ಸು ಮನೆಗೆ ಕರೆದಕೊಂಡು ಬಂದಿದ್ದವರು ದಿನಾಂಕ 14-12-2018 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ದಿನಾಂಕ 14-12-2018 ರಂದು ಕುಶಾಲನಗರದ ಕಾಳೇಘಾಟ್ ಬಾರ್ ಗೆ ಕುಶಾಲನಗರ ನಿವಾಸಿ ವೆಂಕಟೇಶ್ ಎಂಬುವವರು ಹೋಗಿ ಮದ್ಯಪಾನ ಮಾಡಿ ಹಣ ಕೊಡದೇ ಹೋದಾಗ ಚೇತನ್ ಎಂಬುವವರು ಹಣ ಕೇಳಿದಾಗ ವೆಂಕಟೇಶ್ ರವರು ಚಾಕುವಿನಿಂದ ಚೇತನ್ ರವರ ಹೊಟ್ಟೆಯ ಭಾಗಕ್ಕೆ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.