Crime News

ಬೈಕ್ ಕಳವು

ಮೂರ್ನಾಡು ನಿವಾಸಿ ಶ್ರೀನಿವಾಸ ನಾಯ್ಡು ಎಂಬವರು ದಿನಾಂಕ 05/09/2018ರಂದು ಅವರ ತಾಯಿಯ ಮನೆಯ ಮುಂದೆ ನಿಲ್ಲಿಸಿದ್ದ ಅವರ ಕೆಎ-12-ಇ-7679ರ ಬೈಕನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಯುವತಿ ಆತ್ಮಹತ್ಯೆ

ವಿರಾಜಪೇಟೆ ಸಮೀಪದ ಆರ್ಜಿ ನಿವಾಸಿ ಕುಪ್ಪುಸ್ವಾಮಿ ಎಂಬವರ ಮಗಳು ಅಗನ್ಯ ಎಂಬಾಕೆಯು ದಿನಾಂಕ 15/12/2018ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಅಗನ್ಯಳು ಕಾಲು ನೋವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದು ವಾಸಿಯಾಗದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದ್ದು ಘಟನೆ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ

ದಿನಾಂಕ 14/12/2018ರಂದು ಗೋಣಿಕೊಪ್ಪ ಬಳಿಯ ಮಾಯಮುಡಿ ನಿವಾಸಿ ಎನ್‌.ಸಿ.ಮನೋಹರ ಎಂಬವರು ಅವರ ಸಂಬಂಧಿಕರಾದ ವಿಶಾಲಾಕ್ಷಿ ಎಂಬವರ ಕಾರನ್ನು ತೆಗೆದುಕೊಂಡು ಚಾಲಕ ಯೋಗಾನಂದರವರೊಂದಿಗೆ ಗೋಣಿಕೊಪ್ಪದ ಕಡೆಗೆ ಹೋಗುತ್ತಿರುವಾಗ ಬಾಳಾಜಿ ಗ್ರಾಮದ ಬಳಿ ಚಾಲಕ ಯೋಗಾನಂದರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ

ದಿನಾಂಕ15/12/2018ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿಯ ಕೊಂಗಣ ನಿವಾಸಿ ಕಡೇಮಾಡ ನವೀನ ಎಂಬವರೊಂದಿಗೆ ಅವರ ಸೋದರ ಜಗನ್ ಕಾರ್ಯಪ್ಪ ಹಾಗೂ ತಂದೆ ಮಂದಣ್ಣ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ ಗೋಣಿಕೊಪ್ಪ ಬಳಿಯ ಒಂದನೇ ವಿಭಾಗದ ನಿವಾಸಿ ಸತೀಶ ಎಂಬವರ ಪತ್ನಿ ಅನಿತಾ ಎಂಬವರು ದಿನಾಂಕ 14/12/2018ರಂದು ಒಂದನೇ ವಿಭಾಗದ ನಿವಾಸಿ ವಸಂತ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಪತಿ ಸತೀಶನು ಅತೀವ ಮದ್ಯವ್ಯಸನಿಯಾಗಿದ್ದು ಇದರಿಂದಾಗಿ ನೊಂದ ಅನಿತಾಳು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ