Crime News

ರಸ್ತೆ ಅಪಘಾತ

ದಿನಾಂಕ 16/12/2018ರಂದು ಕೊಡ್ಲಿಪೇಟೆ ಬಳಿಯ ಜನಾರ್ಧನಹಳ್ಳಿ ನಿವಾಸಿ ತ್ಯಾಗರಾಜ ಎಂಬವರು ಅವರ ಮೋಟಾರು ಬೈಕಿನಲ್ಲಿ ಬೆಂಬಳೂರಿನಿಂದ ಅವರ ಮನೆಗೆ ಹೋಗುತ್ತಿರುವಾಗ ಬ್ಯಾಡಗೊಟ್ಟ ಬಳಿ ಹಿಂದಿನಿಂದ ಕೆಎ-12-ಆರ್‌-9701ರ ಒಂದು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತ್ಯಾಗರಾಜರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ತ್ಯಾಗರಾಜರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ17/12/2018ರಂದು ಶನಿವಾರಸಂತೆ ಬಳಿಯ ಸುಳುಗಳಲೆ ಕಾಳೋನಿ ನಿವಾಸಿ ಸುಬ್ರಮಣಿ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಪ್ರಕರಣ

ಕುಶಾಲನಗರ ಬಳಿಯ ಗಂಧದಕೋಟೆ ನಿವಾಸಿ ಗಂಗಾಧರ ಎಂಬವರು ದಿನಾಂಕ 16/12/2018ರ ರಾತ್ರಿ ವೇಳೆ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದು ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 17/12/2018ರಂದು ಸೋಮವಾರಪೇಟೆ ಬಳಿಯ ಯಡೂರು ನಿವಾಸಿ ಡಿ.ಟಿ.ಲಿಂಗಪ್ಪ ಎಂಬವರು ಸೋಮವಾರಪೇಟೆ ನಗರದ ಸಫಾಲಿ ಬಾರ್‌ ಬಳಿ ರಸ್ತೆ ದಾಟುತ್ತಿರುವಾಗ ಕೆಎ-12-ಎಸ್-2686ರ ಬೈಕಿನ ಚಾಲಕ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಿಂಗಪ್ಪನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 16/12/2018ರಂದು ರಾತ್ರಿ ವೇಳೆ ರಾಜಸ್ಥಾನದ ನಿವಾಸಿ ರೋಹಿತ್ ಮನೇಶ್ವರಿ ಎಂಬವರು ಅವರ ಕಾರನ್ನು ಗೋಣಿಕೊಪ್ಪ ನಗರದ ಮಾಂಡೊವು ಶೋ ರೂಂ ಬಳಿ ನಿಲ್ಲಿಸಿದ್ದ ಸಮಯದಲ್ಲಿ ಹಿಂದಿನಿಂದ ಕೆಎ-12-ಆರ್‌-5904ರ ಸ್ಕೂಟರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿ ಸ್ಕೂಟರ್ ಸವಾರನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಮಡಿಕೇರಿ ನಗರದ ವೆಬ್ಸ್ ಬಳಿಯ ನಿವಾಸಿ ಕೆ.ಇ.ನಂಜುಂಡ ಎಂಬ 80 ವರ್ಷ ಪ್ರಾಯದ ವೃದ್ದರೊಬ್ಬರು ದಿನಾಂಕ 16/12/2018ರಂದು ಚೇರಂಬಾಣೆಯ ಪಾಕ ಹಬ್ಬಕ್ಕೆ ಹೋದವರು ಇನ್ನೂ ಮರಳಿ ಮನೆಗೆ ಬಂದಿರುವುದಿಲ್ಲವೆಂದು ಅವರ ಪತ್ನಿ ಜಾನಕಿ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 17/12/2018ರಂದು ಉಡುಪಿ ಜಿಲ್ಲೆಯ ಶರತ್ ಎಂಬವರು ಅವರ ಕಾರಿನಲ್ಲಿ ಮಡಿಕೇರಿ ಮೂಲಕ ವಿರಾಜಪೇಟೆಗೆ ಹೋಗುತ್ತಿದ್ದಾಗ ಸಂಪಾಜೆ ಬಳಿಯ ಕೊಯನಾಡಿನಲ್ಲಿ ಮಡಿಕೇರಿ ಕಡೆಯಿಂದ ಕೆಎ-09-ಎಫ್-4983 ರ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ನಿಂಗರಾಜು ಎಂಬವರು ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಇನ್ನೊಂದು ಸರಕು ಸಾಗಣೆ ವಾಹನವನ್ನು ಹಿಂದಿಕ್ಕುವಾಗ ಶರತ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.