Crime News

ಆತ್ಮಹತ್ಯೆ ಪ್ರಕರಣ

ಮಡಿಕೇರಿ ನಗರದ ರಾಜ ರಾಜೇಶ್ವರಿ ನಗರದ ನಿವಾಸಿ ನಂದ ಕುಮಾರ್ ಎಂಬವರು ದಿನಾಂಕ 18/12/2018ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ನಂದ ಕುಮಾರ್‌ರವರು ಕೆಲವು ತಿಂಗಳ ಹಿಂದೆ ಸಾಲ ಮಾಡಿ ರಿಕ್ಷಾ ಖರೀದಿಸಿ ಬಾಡಿಗೆಗೆ ಓಡಿಸುತ್ತಿದ್ದು ಸಾಲ ಕಟ್ಟಲು ಸಾಧ್ಯವಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಶನಿವಾರಸಂತೆಯ ತ್ಯಾಗರಾಜ ಕಾಲೊನಿ ನಿವಾಸಿ ಎಂ.ಎಂ.ಜವಾದ್ ಎಂಬವರು ದಿನಾಂಕ 15/12/2018ರಂದು ಮನೆಯಿಂದ ಅಂಗಡಿಗೆಂದು ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿರುವುದಾಗಿ ಜವಾದ್‌ರವರ ತಂದೆ ಮಹಮದ್ ಆಲಿರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 18/12/2018ರಂದು ಕುಶಾಲನಗರ ಹೋಬಳಿಯ ಮಣಜೂರು ನಿವಾಸಿ ಶಿವರಾಮ್ ಎಂಬವರು ಅವರ ಬೈಕಿನಲ್ಲಿ ಶಿರಂಗಾಲದ ಕಡೆಗೆ ಹೋಗುತ್ತಿರುವಾಗ ಶಿರಂಗಾಲ ಗ್ರಾಮದ ಬಳಿ ಕೊಣನೂರು ಕಡೆಯಿಂದ ಕೆಎ-16-ಡಿ-0519ರ ಬಸ್ಸಿನ ಚಾಲಕ ಬಸ್ಸನ್ನು ಅತಿ ವೇಗ ಮತ್ತು ಅಜಾಗರೂತೆಯಿಂದ ಚಾಲಿಸಿಕೊಂಡು ಬಂದು ಶಿವರಾಮ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಶಿವರಾಮ್‌ವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ಗಾಯಾಳು ಸಾವು

ದಿನಾಂಕ 16/12/2018ರಂದು ಕುಶಾಲನಗರ ಬಳಿಯ ಮಳೂರಿನ ಹೋಂಸ್ಟೇ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಶಿವಣ್ಣ ಎಂಬವರು ಬೆಂಗಳೂರಿನ ಪ್ರದೀಪ್ ಕುಮಾರ್ಎಂಬವರೊಂದಿಗೆ ಕಾರಿನಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಆನೆಕಾಡಿನ ಬಳಿ ಹೆದ್ದಾರಿಯಲ್ಲಿಪ್ರದೀಪ್‌ ಕುಮಾರ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರುಚಾಲಕ ಪ್ರದೀಪ್‌ ಕುಮಾರ್‌ರವರ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು ಶಿವಣ್ಣರವರನ್ನು ಗಂಭೀರಗಾಯಗಳೊಂದಿಗೆ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆಫಲಕಾರಿಯಾಗದೆ ದಿನಾಂಕ 18/12/2018ರಂದು ಶಿವಣ್ಣರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ18/12/2018ರಂದು ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ನಿವಾಸಿ ಯೋಗೇಶ ಎಂಬವರು ಅಂಗಡಿಯಿಂದ ಅವರಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ವಿನು ಎಂಬವರು ಹಾಗೂ ಮತ್ತೋರ್ವ ವ್ಯಕ್ತಿಯುಯೋಗೇಶರವರ ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ