Crime News

ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ಸೋಮಪ್ಪ ಎಂಬವರು ದಿನಾಂಕ 19/12/2018ರಂದು ಮನೆಯಲ್ಲಿ ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಸೋಮಪ್ಪನವರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು ಒಂದು ಕಾಲು ಊದಿಕೊಂಡು ರಕ್ತಸ್ರಾವವಾಗುತ್ತಿದ್ದು  ವಾಸಿಯಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವತಿಯ ಅಸ್ವಾಭಾವಿಕ ಸಾವು

ಗೋಣೊಕೊಪ್ಪ ಬಳಿಯ ಚೆನ್ನಂಗೊಲ್ಲಿ ನಿವಾಸಿ ಎರವರ ಮುತ್ತಿ ಎಂಬವರ ಮಗಳು ಎರವರ ಚಿಟ್ಟೆ ಎಂಬ ಯುವತಿಯು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು ದಿನವೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದರಂತೆ ದಿನಾಂಕ 16/12/2018ರಂದು ಮನೆಯಲ್ಲಿ ಮಾತ್ರೆ ಸೇವಿಸಿದ್ದು ಇದ್ದಕ್ಕಿದ್ದಂತೆ ವಾಂತಿ ಮಾಡುತ್ತಿದ್ದವಳನ್ನು ಚಿಕಿತ್ಸೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 19/12/2018ರಂದು ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.