Crime News

ನೇಣುಬಿಗಿದು ಕೊಂಡು ವೃದ್ದೆ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಗ್ಗಳ ಗ್ರಾಮದ ಸೆಂಟ್ ಜೂಡ್ ಚರ್ಚ್ ಆಶ್ರಮದಲ್ಲಿ ನೆಲ್ಲಿಹುದಿಕೇರಿಯ ವೃದ್ದೆ ಟಿ.ಸಿ. ಸುಶೀಲಾ ಎಂಬವರು ವಾಸವಾಗಿದ್ದು ಮಾನಸಿಕ ಹಾಗು ದೈಹಿಕ ಖಾಯಿಲೆಯಿಂದ ಬಳಲುತ್ತಿದ್ದು ಅವರು ತಾವು ವಾಸವಾಗಿರುವ ಚರ್ಚಿನಲ್ಲಿ ದಿನಾಂಕ 20-12-2018 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸದರಿ ಚರ್ಚಿನ ಫಾದರ್ರವರಾದ ಟಿ. ಸುನಿಲ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮದ್ಯಸೇವಿಸಿದ ವ್ಯಕ್ತಿ ಸಾವು:

ದಿನಾಂಕ 18-12-2018 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ನಗರದ ನಿವಾಸಿ ಶ್ರೀನಿವಾಸ ತನ್ನ ತಮ್ಮ ಶಾಂತರಾಜು ಮತ್ತು ಇತರೆ 12 ಜನರೊಂದಿಗೆ ಮಡಿಕೇರಿಗೆ ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಿದ್ದು, ದಿನಾಂಕ 19-12-2018 ರಂದು ಶಾಂತರಾಜುವರು ವಿಪರೀತ ಮದ್ಯಸೇವಿಸಿ ಮಲಗಿದ್ದು ದಿನಾಂಕ 20-12-2018 ರಂದು ಸದರಿಯವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಬಗ್ಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರು ಸಾವನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ:

ದಿನಾಂಕ 20-12-2018 ರಂದು ಸೋಮವಾರಪೇಟೆ ನಗರದ ಜನತಾ ಕಾಲೋನಿ ವಾಸಿ ಸುಂದರ ಎಂಬವರು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಂಬಂಧಿ ಈ ಮುತ್ತಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.