Crime News

ರಸ್ತೆ ಅಪಘಾತ ವ್ಯಕ್ತಿಯ ದುರ್ಮರಣ

              ದಿನಾಂಕ 22-12-2018 ರಂದು ಮಡಿಕೇರಿ ನಗರದ ನಿವಾಸಿ ರಾಣಿಪೇಟೆಯ ನಿವಾಸಿ ಮುಸ್ತಫ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾನ್ವೆಂಟ್ ಜಂಕ್ಷನ್ ಹತ್ತಿರ ಮರಕ್ಕೆ ಡಿಕ್ಕಿಪಡಿಸಿ ತಲೆಯ ಭಾಗಕ್ಕೆ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಿದಲ್ಲು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 22-12-2018 ರಂದು ಎಮ್ಮೆಮಾಡುವಿನ ನಿವಾಸಿ ಸಿದ್ದಿಕ್ ಎಂಬುವವರು ತನ್ನ ಆಟೋದಲ್ಲಿ ನಾಪೋಕ್ಲುವಿನಿಂದ ಎಮ್ಮೆಮಾಡುವಿಗೆ ಸಫಾನಾ, ಮರಿಯಮ್ಮ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವಾಗ ಹಳೆತಾಲೂಕಿಗೆ ತಲುಪುವಾಗ ಎದುರಿನಿಂದ ಮಾರುತಿ ಕಾರನ್ನು ಅದರ ಚಾಲಕ ಬ್ರಿಜೇಶ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮಗುಚಿ ಬಿದ್ದು
ಆಟೋದಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಅಪಘಾತ

          ದಿನಾಂಕ 22-12-2018 ರಂದು ಸೋಮವಾರಪೇಟೆ ತಾಲೋಕಿನ ವಾಲ್ನೂರು ಗ್ರಾಮದ ಪುಷ್ಪಾ, ಸೀತು, ಯಶೋಧ, ಸುರೇಶ ಮತ್ತು ಇತರರೊಂದಿಗೆ ಸಿಂಗನಳ್ಳಿ ಗ್ರಾಮದಿಂದ ಮನೆಗೆ ಜೀಪಿನಲ್ಲಿ ಹೋಗುತ್ತಿರುವಾಗ ಚಾಲಕ ಪ್ರಕಾಶ್ ರವರು ಜೀಪನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ತಸ್ತೆಯ ಬದಿಗೆ ಮಗುಚಿ ಬಿದ್ದ ಪರಿಣಾಮ ಜೀಪಿನಲ್ಲಿದ್ದ ಪುಷ್ಪಾ, ಯಶೋಧ ಮತ್ತು ಸೀತುರವರಿಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.