Crime News

ಟ್ರಾಕ್ಟರ್ ಅಪಘಾತ ವ್ಯಕ್ತಿ ದುರ್ಮರಣ:

ದಿನಾಂಕ 23-12-2018 ರಂದು ಕೊಡ್ಲಿಪೇಟೆ, ಊರುಗುತ್ತಿ ಗ್ರಾಮದ ನಿವಾಸಿ ಯು.ವೈ ಮದನ್ ಎಂಬವರು ತಮ್ಮ ಟ್ರಾಕ್ಟರ್ ನಲ್ಲಿ ಕೊಡ್ಲಿಪೇಟೆಯಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ಮಲ್ಲಳ್ಳಿ ಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿ ಟ್ರಾಕ್ಟರ್ ಅಪಘಾತಕ್ಕೀಡಾಗಿ ಅದನ್ನು ಚಾಲನೆ ಮಾಡುತ್ತಿದ್ದ ಯು.ವೈ. ಮದನ್ ರವರು ಸಾವನಪ್ಪಿದ್ದು ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ನಗ ನಾಣ್ಯ ಕಳವು:

ದಿನಾಂಕ 21-12-2018ರ ಸಂಜೆ 6-00 ಗಂಟೆಯಿಂದ ದಿನಾಂಕ 23-12-2018 ರಂದು ಬೆಳಗ್ಗೆ 7-30 ಗಂಟೆಯ ಮದ್ಯದ ಅವಧಿಯಲ್ಲಿ ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆಯ ಕಲ್ಲಳ್ಳಿ ಬೀದಿಯಲ್ಲಿರುವ ಶ್ರೀನಿವಾಸ್ ಎಂಬವರ ಮನೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ತೆಗೆದು ಮನೆಯೊಳಗಿಂದ ಚಿನ್ನಾಭರಣ ಮತ್ತು ನಗದು ರೂ.2,000/- ಗಳನ್ನು ಕಳ್ಳತನ ಮಾಡಿಕೊಂಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಬಸ್ ಡಿಕ್ಕಿ:

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ಕುಶಾಲನಗರ ಹೋಬಳಿ ಹೆಗ್ಗಡಹಳ್ಳಿ ಗ್ರಾಮದ ನಿವಾಸಿ ಕೆ.ಸಿ. ರಘು ಎಂಬವರು ದಿನಾಂಕ 23-12-2018 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದ ಕೆ.ಸಿ. ರಘು, ಪತ್ನಿ ಶೃತಿ ಮತ್ತು ಮಗಳಾದ ಸಮನ್ವಿತಗೌಡ ರವರಿಗೆ ಗಾಯಗಳಾಗಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು:

ಸುಂಟಿಕೊಪ್ಪ ಠಾಣಾ ಸರಹದ್ದಿನ ಅಪ್ಪಾರಂಡ ಬಡಾಣೆಯಲ್ಲಿ ವಾಸವಾಗಿದ್ದ ಶ್ರೀಮತಿ ಶೈಲಜಾ ರವರು ದಿನಾಂಕ 15-12-2018 ರಂದು ಸೀಮೆಣ್ಣೆ ಸ್ಟೌವ್ ನಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಬಟ್ಟೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಆಕೆಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಸಂಬಂಧ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಯವರು ದಿನಾಂಕ 22-12-2018 ರಂದು ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತದಲ್ಲಿ ವ್ಯಕ್ತಿ ಸಾವು:

ದಿನಾಂಕ 22-12-2018 ರಂದು ರಾತ್ರಿ 11-15 ಗಂಟೆಗೆ ಕುಶಾಲನಗರದ ಕಾರ್ಯಪ್ಪ ಸರ್ಕಲ್ ನಲ್ಲಿ ಕುಶಾಲನಗರದ ಟೌನ್ ಕಾಲೋನಿ ನಿವಾಸಿಯಾದ ಮುರುಳಿ ಎಂಬವರು ಹಿಂದಿನ ಸೀಟಿನಲ್ಲಿ ಶಿವಕುಮಾರ್ ಎಂಬವರನ್ನು ಕೂರಿಸಿಕೊಂಡು ಮಡಿಕೇರಿ ಕಡೆಯ ರಸ್ತೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿದ್ದ ಬ್ಯಾರಿಕೇಡ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಅವರನ್ನು ದಾಖಲಿದ್ದು, ಚಿಕಿತ್ಸೆ ಸಂದರ್ಭದಲ್ಲಿ ಮುರುಳಿಯವರು ಮೃತಪಟ್ಟಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.