Crime News

ಮನೆಯ ವಿಚಾರದಲ್ಲಿ ಜಗಳ:

ದಿನಾಂಕ 24-12-2018 ರಂದು ಮಡಿಕೇರಿ ತಾಲೋಕು ಬಲಮುರಿ ಗ್ರಾಮದ ನಿವಾಸಿ ಜಿ.ಎಸ್. ತೇಜುರವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ತಮ್ಮ ತಂದೆಯ ಮನೆಯಲ್ಲಿರುವಾಗ್ಗೆ ಅವರ ಅಣ್ಣ ಜಿ.ಎಸ್. ಲಕ್ಷು ಎಂಬವರು ಹೊಸ ಮನೆ ಕಟ್ಟುತ್ತಿರುವ ವಿಚಾರದಲ್ಲಿ ಜಗಳ ಮಾಡಿ ಜಿ.ಎಸ್. ತೇಜು ಮತ್ತು ಅವರ ಪತ್ನಿ ಕುಮುದಿನಿ ಮೇಲೆ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

ವಿರಾಜಪೇಟೆ ನಗರದ ಸುಭಾಷ್ ನಗರದ ನಿವಾಸಿ ಅಬೂಬಕರ್ ರವರ ಮನೆಗೆ ದಿನಾಂಕ 22-12-2018 ರಿಂದ 25-12-2018 ರ13-00 ಪಿ.ಎಂ. ನಡುವಿನ ಅವಧಿಯಲ್ಲಿ ಯಾರೋ ಕಳ್ಳತು ಬಾಗಿಲನ್ನು ತೆಗೆದು ಒಳ ಪ್ರವೇಶಿಸಿ ಗಾಡ್ರೇಜ್ ನ್ನು ತೆರೆದು ಅದರಲ್ಲಿಟ್ಟಿದ್ದ 2 ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ನಗರದ ಮೀನುಪೇಟೆಯಲ್ಲಿರುವ ಹೆಚ್.ಎಂ. ರೆಸಿಡೆನ್ಸಿ ಯಲ್ಲಿ ವಾಸವಾಗಿರುವ ಶ್ರೀಮತಿ ಟಿ.ಆರ್. ದಿವ್ಯಾ ಎಂಬವರ ಗಂಡ ಬಿ.ಡಿ. ಉದಯ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 24-12-2018 ರಂದು ನೇಣುಬಿಗಿದು ಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ:

ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗೂರು ಗ್ರಾಮದ ನಿವಾಸಿ ಪಣಿ ಎರವರ ಗಣೇಶರವರ ತಾಯಿ ಬೋಜಿ ರವರು ದಿನಾಂಕ 25-12-2018 ರಂದು ತಮ್ಮ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ತಯಾರಿಕೆ, ಪ್ರಕರಣ ದಾಖಲು:

ಶನಿವಾರಸಂತೆ ಠಾಣೆ ಸರಹದ್ದಿನ ಕ್ಯಾತೆ ಗ್ರಾಮದ ನಿವಾಸಿ ಕೆ.ಎಂ. ಲೋಕೇಶ್ ಎಂಬವರು ತಮ್ಮ ಮನೆಯ ಹಿಂದುಗಡೆ ಕಾಫಿ ತೋಟದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿಯನ್ನು ತಯಾರು ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುನುಷ್ಯ ಕಾಣೆ:

ಕುಶಾಲನಗರ ನಗರ ಠಾಣಾ ಸರಹದ್ದಿನ ಮುಳ್ಳುಸೋಗೆಯಲ್ಲಿ ವಾಸವಾಗಿರುವ ಶ್ರೀಮತಿ ಸೀಮಾ ಎಂಬವರ ಪತಿ ಸೈಯದ್ ಜಾಫರ್ ಎಂಬವರು ದಿನಾಂಕ 14-11-2018 ರಂದು ಮನೆಯಿಂದ ವ್ಯಾಪಾರಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಸದರಿ ಶ್ರೀಮತಿ ಸೀಮಾ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದ ನಿವಾಸಿ ತಮ್ಮಣ್ಣ ಎಂಬವರ ಮಗ ಮಂಜು ಎಂಬಾತ ದಿನಾಂಕ 24-12-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.