Crime News

ಹಲ್ಲೆ ಪ್ರಕರಣ

ದಿನಾಂಕ 25/12/2018ರಂದು ನಾಪೋಕ್ಲು ಬಳಿಯ ಮರಂದೋಡ ನಿವಾಸಿ ನಿಡುಮಂಡ ಅಯ್ಯಪ್ಪ ಎಂಬವರು ಅವರ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ನಿಡುಮಂಡ ಗಣೇಶ ಎಂಬವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರಾಡಿನಿಂದ ಅಯ್ಯಪ್ಪನವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಅಯ್ಯಪ್ಪನವರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಗಣೇಶರವರೂ ಪ್ರತಿ ದೂರು ನೀಡಿದ್ದು ನಾಪೋಕ್ಲು ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 25/12/2018ರಂದು ಬೆಂಗಳುರಿನ ನಿವಾಸಿ ಮಹದೇವಯ್ಯ ಎಂಬವರು ಅವರ ಮಗ ರಿತೇಶ್ ಎಂಬಾತನೊಂದಿಗೆ ಕಾರಿನಲ್ಲಿ ಸೋಮವಾರಪೇಟೆಯಿಂದ ಮಡಿಕೇರಿಗೆ ಹೋಗುತ್ತಿರುವಾಗ ಇಗ್ಗೋಡ್ಲಿನ ಬಳಿ ಎದುರಿನಿಂದ ಬರುತ್ತಿದ್ದ ಒಂದು ಲಾರಿಗೆ ದಾರಿ ಬಿಡುವಾಗ ಕಾರನ್ನು ಅದರ ಚಾಲಕ ರಿತೇಶ್‌ ವೇಗವಾಗಿ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು

ಕುಶಾಲನಗರದ ಎರಡನೇ ಬ್ಲಾಕ್ ನಿವಾಸಿ ವಿವಿನ್ ಡಿಸೋಜಾ ಎಂಬವರು ಅವರ ಕೆಎ-05-ಹೆಚ್‌ಎಸ್-8881ರ ಮೋಟಾರು ಬೈಕನ್ನು ದಿನಾಂಕ 19/12/2018ರಂದು ಅವರ ಮನೆಯ ಬಳಿ ನಿಲ್ಲಿಸಿದ್ದು ಮಾರನೇ ದಿನ ನೋಡುವಾಗ ಬೈಕನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ; ವ್ಯಕ್ತಿ ಸಾವು

ದಿನಾಂಕ 26/12/2018ರಂದು ರಾತ್ರಿ ವೇಳೆ ಮಡಿಕೇರಿ ಬಳಿಯ ಮದೆನಾಡು ನಿವಾಸಿಗಳಾದ ಯು.ಕೆ.ಜಯಕುಮಾರ್ ಎಂಬವರ ಸೋದರ ಯು.ಕೆ.ಉತ್ತಪ್ಪ ಎಂಬವರು ಪೂವಯ್ಯ ಎಂಬವರ ಸ್ಕೂಟರಿನಲ್ಲಿ  ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮದಿಂದ ಕುಶಾಲನಗರ ಪಟ್ಟಣಕ್ಕೆ ಹೋಗುತ್ತಿರುವಾಗ ಮಾದಾಪಟ್ನದ ಇಂಜಿನಿಯರಿಂಗ್ ಕಾಲೇಜು ಬಳಿ ಕುಶಾಲನಗರ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಬಿ.ಸಿ.ಯೋಗಾನಂದ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉತ್ತಪ್ಪನವರು ಪ್ರಯಾಣಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಉತ್ತಪ್ಪನವರಿಗೆ ತೀವ್ರತರದ ಗಾಯಗಳಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.