Crime News

ರಸ್ತೆ ಅಪಘಾತ

ದಿನಾಂಕ 19/12/2018ರಂದು ಮಡಿಕೇರಿ ನಗರ ಸಭೆಯ ಕಸ ವಿಲೇವಾರಿ ಆಟೋ ಟಿಪ್ಪರ್ ಒಂದನ್ನು ನಗರದ ಹೋಟೆಲ್ ಕೂರ್ಗ್‌ ಇಂಟರ್‌ ನ್ಯಾಷನಲ್ ಮುಂದೆ ಕಸ ಸಂಗ್ರಹಣೆಗೆಂದು ನಿಲ್ಲಿಸಿದ್ದ ಸಮಯದಲ್ಲಿ ಹೋಟೆಲಿನ ಪಿಕ್‌ಅಪ್ ವಾಹನ ಸಂಖ್ಯೆ ಕೆಎ-12-ಬಿ-5605 ನ್ನು ಅದರ ಚಾಲಕ ಅತಿಯಾದ ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ನಗರ ಸಭೆಯ ಆಟೋ ಟಿಪ್ಪರ್ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಟಿಪ್ಪರ್ ವಾಹನಕ್ಕೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಪಘಾತ

ದಿನಾಂಕ 27/12/2018ರಂದು ಮಡಿಕೇರಿ ಬಳಿಯ ಮದೆನಾಡು ನಿವಾಸಿ ಹುದೇರಿ ಲೋಕೇಶ್ ಎಂಬವರು ಕಾಟಕೇರಿ ಗ್ರಾಮದ ರಸ್ತೆಯಲ್ಲಿ ಅವರ ಸ್ಕೂಟರನ್ನು ನಿಲ್ಲಿಸಿ ಇಸ್ಮಾಯಿಲ್ ಎಂಬವರೊಡನೆ ಮಾತನಾಡುತ್ತಿರುವಾಗ ಮಂಗಳೂರು ಕಡೆಯಿಂದ ಕೆಎ-09-ಎಂಇ-0014ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದ ಲೋಕೇಶ್ ಹಾಗೂ ಇಸ್ಮಾಯಿಲ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಲೋಕೇಶ್ ಹಾಗೂ ಇಸ್ಮಾಯಿಲ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.