Crime News

ಅಪಘಾತ ಪ್ರಕರಣ

            ದಿನಾಂಕ 28-12-2018 ರಂದು ಮಡಿಕೇರಿ ತಾಲೋಕಿನ ಹೊದ್ದೂರು ಗ್ರಾಮದ ನಿವಾಸಿಯಾದ ಪುರುಷೋತ್ತಮ ಎಂಬುವವರು ಮಂಗಳೂರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಕೊಯನಾಡುವಿನ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿಯು ಮತ್ತೊಂದು ವಾಹನವನನ್ನು ಹಿಂದಿಕ್ಕಿ ಕಾರಿಗೆ ಡಿಕ್ಕಿಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

           ದಿನಾಂಕ 28-12-2018 ರಂದು ಸೋಮವಾರಪೇಟೆಯ ಬಜೆಗುಂಡಿಯ ನಿವಾಸಿಯಾದ ಮಹದೇವಸ್ವಾಮಿಯವರು ಅನಾರೋಗ್ಯದಿಂದ ಬಳಲುತ್ತಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ನಾಪತ್ತೆ

            ಸೋಮವಾರಪೇಟೆ ತಾಲೋಕಿನ ರಂಗಸಮುದ್ರದ ನಿವಾಸಿ ಚೇತನ್ ಎಂಬುವವರು ದಿನಾಂಕ 12-12-2018 ರಂದು ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದು, ಈ ಬಗ್ಗೆ ಪತ್ನಿ ಶೋಭಿತಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಡಿಕ್ಕಿ

            ದಿನಾಂಕ 27-12-2018 ರಂದು ಪೊನ್ನಂಪೇಟೆ ನಗರದ ಕೃಷ್ಣ ಕಾಲೋನಿಯ ನಿವಾಸಿಯಾದ ಮಣಿಕಂಠ ಎಂಬುವವರು ಕೊಡವ ಸಮಾಜದ ಮುಂದಿನ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ತಿಕ್ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಮಣಿಕಂಠರವರ ಮುಂದೆ ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಪಡಿಸಿದ ಪರಿಣಾಮ ಕಾಲಿಗೆ ಮತ್ತು ತಲೆಗೆ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಹೆಸರು ವಿಳಾಸ ತಿಳಿಯದೇ ಇದ್ದು, ಈ ಬಗ್ಗೆ ಮಣಿಕಂಠರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.