Crime News

ಹಲ್ಲೆ ಪ್ರಕರಣ

ದಿನಾಂಕ 28/12/2018ರಂದು ಮದೆ ಗ್ರಾಮದ ನಿವಾಸಿಗಳಾದ ನಾಗೇಶ್ ಹಾಗೂ ಚಂದ್ರಾವತಿ ಎಂಬವರುಗಳು ಮನೆಯಲ್ಲಿರುವಾಗ ರಾತ್ರಿ ವೇಳೆ ಅದೇ ಗ್ರಾಮದ ನಿವಾಸಿಗಳಾದ ದಯಾ ಮತ್ತು ಪ್ರಿಯಾ ಎಂಬವರು ಮನೆಯ ಬಾಗಿಲನ್ನು ಬಲಾತ್ಕಾರವಾಘಿ ಮುರಿ್ಉ ಒಳ ಪ್ರವೇಶಿಸಿ ನಾಗೇಶ್‌ ಹಾಗೂ ಚಂದ್ರಾವತಿರವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು

ಕುಶಾಲನಗೆದ ಟೌನ್ ಕಾಲೊನಿ ನಿವಾಸಿ ಗಣೇಶ್‌ ಎಂಬವರು ದಿನಾಂಕ 29/11/2018ರಂದು ನಗರದ ಗುಂಡೂರಾವ್‌ ಬಡಾವಣೆಯಲ್ಲಿ ಅವರ ಮೋಟಾರು ಬೈಕನ್ನು ನಿಲ್ಲಿಸಿ ಜಾತ್ರೆ ವೀಕ್ಷಿಸಿ ಬಂದು ನೋಡಿದಾಗಿ ಬೈಕನ್ನು ಯಾರೋ ಕಳವು ಮಾಡಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ ಪ್ರಕರಣ

ದಿನಾಂಕ 16/12/2018ರಂದು ಕುಶಲನಗರದ ನೆಹರೂ ಬಡಾವಣೆ ನಿವಾಸಿ ಹೆಚ್‌.ಜೆ.ದೊಡ್ಡಯ್ಯ ಎಂಬವರು ಮನೆಯಲ್ಲಿರುವಾಗ ಅದೇ ಬಡಾವಣೆಯ ಕೃಷ್ಣಪ್ಪ ಮತ್ತು ನಾಗೇಗೌಡ ಬಡಾವಣೆಯ ಆನಂದ ಕರಂದ್ಲಾಜೆ ಎಂಬವರು ಬಂದು ಮನೆಗೆ ಅತಿಕ್ರಮ ಪ್ರವೇಶ ಮಾಡಿ ದೊಡ್ಡಯ್ಯನವರ ಪಕ್ಕದ ಖಾಲಿ ಜಾಗಕ್ಕೆ ಬೇಲಿ ಹಾಕಿದ ಕುರಿತು ಜಗಳವಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/12/2018ರಂದು ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿ ನಿವಾಸಿ ಕಾಳಿಯಪ್ಪ ಎಂಬವರು ಅವರ ಸ್ಕೂಟರಿನಲ್ಲಿ ಕುಶಾಲನಗರ ಪಟ್ಟಣಕ್ಕೆ ಹೋಗುತ್ತಿರುವಾಗ ತಾವರೆಕೆರೆ ಬಳಿ ಸ್ಕೂಟರ್ ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ಯಾರಿಕೇಡ್ ಬಳಿ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 28/12/2018ರಂದು ಕುಶಾಲನಗರ ಬೈಚನಹಳ್ಳಿ ನಿವಾಸಿ ಸಮೀರಾ ಎಂಬ ಮಹಿಳೆಯೊಬ್ಬರು ನಿಸರ್ಗಧಾಮದ ಕಡೆಗೆ ಹೋಗಲು ಬೈಚನಹಳ್ಲಿಯ ಬಳಿ ರಿಕ್ಷಾವನ್ನು ಏರುತ್ತಿರುವಾಗ ಕುಶಾಲನಗರ ಕಡೆಯಿಂದ ಒಂದು ಬೈಕನ್ನು ಅದರ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಮೀರಾರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/12/2018ರಂದು ಕುಶಾಲನಗರ ಬಳಿಯ ಸುಂದರನಗರ ನಿವಾಸಿ ಅಪೂರ್ವ ಎಂಬವರ ತಾಯಿ ಮಂಜುಳಾ ಎಂಬವರು ಅಪೂರ್ವರವರ ಅತ್ತಿಗೆ ದೀಪಿಕಾ ಹಾಗೂ ಮಗಳು ಲಿವಿಕಾರೊಂದಿಗೆ ಚಿಕ್ಕತ್ತೂರು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಎನ್-9346ರ ಕಾರನ್ನು ಅದರ ಚಾಲಕ ಅತಿ ವೇಗ ಮ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುಳಾರವರಿಗೆ ಡಿಕ್ಕಿಪಡಿಡಿದ ಪರಿಣಾಮ ಮಂಜುಳಾರವರಿಗೆ ಹಾಗೂ ಅವರು ಎತ್ತಿಕೊಂಡಿದ್ದ ಬಾಲಕಿ ಲಿವಿಕಾಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ ಅವಘಢ ; ಬಾಲಕ ಸಾವು

ದಿನಾಂಕ 29/12/2018ರಂದು ವೇಳೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗಣಿಕೆಹಾಳ್ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೆಎ-22-ಬಿ-5731ರ ಖಾಸಗಿ ಬಸ್ಸಿನಲ್ಲಿ ಪ್ರವಾಸಕ್ಕೆಂದು ಕೊಡಗಿಗೆ ಬರುತ್ತಿರುವಾಗ ಮಧ್ಯರಾತ್ರಿ ವೇಳೆ ಸುಂಟಿಕೊಪ್ಪ ಬಳಿಯ ಶಾಂತಿಗಿರಿ ತೋಟದ ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸನ್ನು ಅದರ ಚಾಲಕ ಜಾನ್ಸನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ  ಚರಂಡಿಗೆ ಮಗುಚಿಕೊಂಡು ಬಸ್ಸಿನಲ್ಲಿದ್ದ ಐವರು ವಿದ್ಯಾರ್ಥಿಗಳು ಮತ್ತು ಓರ್ವ ಅಡುಗೆ ಸಿಬ್ಬಂದಿ ಬಸ್ಸಿನಿಂದ ಕೆಳಕ್ಕೆ ಬಿದ್ದಿದ್ದು ಇವರ ಪೈಕಿ ಬಸವರಾಜ್ ಎಂಬ ವಿದ್ಯಾರ್ಥಿಯು ಸ್ಥಳದಲ್ಲೇ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.