Crime News
ಅಕ್ರಮ ಬಂದೂಕು ವಶ
ವಿರಾಜಪೇಟೆ ಬಳಿಯ ಹೆಗ್ಗಳ ನಿವಾಸಿ ಸುರೇಶ ಎಂಬವರು ಅಕ್ರಮವಾಗಿ ಬಂದೂಕನ್ನು ಹೊಂದಿರುವುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ಬಸವರಾಜುರವರು ದಿನಾಂಕ 19/04/2018ರಂದು ಸುರೇಶರವರ ಮನೆಗೆ ತೆರಳಿ ಒಂದು ಒಂಟಿ ನಳಿಗೆಯ ಬಂದೂಕನ್ನು ವಶಪಡಿಸಿಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಮರಳು ಸಾಗಾಟ ಪತ್ತೆ
ದಿನಾಂಕ 19/04/2018ರಂದು ಸೋಮವಾರಪೇಟೆ ಬಳಿಯ ಕೂತಿ ಮಾರ್ಗವಾಗಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ತೋಳೂರು ಶೆಟ್ಟಳ್ಳಿ ಬಳಿ ಎದುರಿನಿಂದ ಕೆಎ-12-ಬಿ-0241ರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.