Crime News

ಮನೆಗೆ ನುಗ್ಗಿ ನಗ ನಾಣ್ಯ ಕಳ್ಳತನ:

ದಿನಾಂಕ 29-12-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಮಡಿಕೇರಿ ತಾಲೋಕು ಕಾಟಕೇರಿ ಗ್ರಾಮದ ನಿವಾಸಿ ಬಿ.ಎಸ್.ಆನಂದ ರವರು ತಮ್ಮ ಮನೆಯವರೊಂದಿಗೆ ಮಡಿಕೇರಿ ನಗರದ ಗೌಡ ಸಮಾಜಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಅವರ ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ 96,500 ರೂ. ಬೆಲೆಬಾಳುವ ಚಿನ್ನಾಭರಣ ಹಾಗು ನಗರದು ರೂ.3500/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿರ ವ್ಯಕ್ತಿಯ ಮೃತದೇಹ ಪತ್ತೆ:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಾವೂರು ಗ್ರಾಮದಲ್ಲಿರುವ ಬಸ್ಸು ನಿಲ್ದಾಣದಲ್ಲಿ ಒಂದು ಅಪರಿಚಿತ ಗಂಡಸಿನ ಮೃತದೇಹವು ಪತ್ತೆಯಾಗಿದ್ದು ಈ ಸಂಬಂಧ ಹೆಚ್.ಜೆ. ಸತೀಶ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು, ಬೇಟೋಳಿ ಗ್ರಾಮದ 1ನೇ ಪೆರುಂಬಾಡಿಯಲ್ಲಿ ವಾಸವಾಗಿದ್ದ ಹೆಚ್.ಕೆ. ಅಯ್ಯಪ್ಪ (67) ಎಂಬವರು ತಾವು ವಾಸವಾಗಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮಗ ಹೆಚ್.ಎ. ಸುನಿಲ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಅಪಘಾತದಲ್ಲಿ ವ್ಯಕ್ತಿ ಸಾವು:

ಕುಶಾಲನಗರ ಸಮೀಪದ ಗೋಂದಿಬಸವನಳ್ಳಿ ಗ್ರಾಮದಲ್ಲಿ ವಾಸವಾಗಿರುವ ಪ್ರವೀಣ್ ಎಂಬವರ ತಂದೆ ಕಾಳಿಯಪ್ಪ ಎಂಬವರು ದಿನಾಂಕ 29-12-2018 ರಂದು ಕುಶಾಲನಗರದ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕುಶಾಲನಗರದ ತಾವರಕೆರೆ ಬಳಿ ಸ್ಕೂಟರ್ ಅಪಘಾತಕ್ಕೀಡಾಗಿ ಸದರಿಯವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಸಂಬಂಧ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 30-12-2018 ರಂದು ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತದಲ್ಲಿ ವ್ಯಕ್ತಿ ಸಾವು:

ಸೋಮವಾರಪೇಟೆ ತಾಲೋಕು ಮಣಜೂರು ಗ್ರಾಮದ ನಿವಾಸಿ ಸೋಮಶೇಖರ ಎಂಬವರ ಸಹೋದರ ಶಿವರಾಮ್ ಎಂಬವರು ದಿನಾಂಕ 18-12-2018 ರಂದು ಬೆಳಗ್ಗೆ ತಮ್ಮ ಬಾಪ್ತು ಮೋಟಾರು ಸೈಕಲಿನಲ್ಲಿ ಶಿರಂಗಾಲದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬಸ್ಸ್ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಶಿವರಾಮ್ ರವರ ತಲೆಗೆ ತೀವ್ರ ತರಹದ ಗಾಯವಾಗಿ ಅವರನ್ನು ಚಿಕಿತ್ಸೆಗೆ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ಶಿವರಾಮ್ ರವರು ದಿನಾಂಕ 30-12-2018 ರಂದು ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.