Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 31/12/2018ರಂದು ಮಡಿಕೇರಿ ಬಳಿಯ ಮದೆ ಗ್ರಾಮದ ನಿವಾಸಿ ದೇವಯ್ಯ ಎಂಬವರು ಮನೆಯಲ್ಲಿ ಕ್ರಿಮಿ ನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ದೇವಯ್ಯನವರು ಅಧಿಕ ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಿಂದ ನರಳುತ್ತಿದ್ದು ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 31/12/2018ರಂದು ಕೆಎಸ್‌ಆರ್‌‌ಟಿಸಿ ಸಂಸ್ಥೆಯ ಮೈಸೂರು ಗ್ರಾಮಾಂತರ ವಿಭಾಗದ ಕೆಎ-09-ಎಫ್‌-4193 ಬಸ್ಸಿನ ನಿರ್ವಾಹಕರಾದ ಯುವರಾಜ್‌ ರಾಥೋಡ್ ಎಂಬವರು ಮಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತಿರುವಾಗ ಮಡಿಕೇರಿ ಬಸ್‌ ನಿಲ್ದಾಣದಲ್ಲಿ ಬಸ್ಸೇರಿದ ಮಡಿಕೇರಿ ನಗರದ ಪುಟಾಣಿ ನಗರದ ನಿವಾಸಿ ಸುನಿಲ್ ಎಂಬಾತನು ನಿರ್ವಾಹಕರ ಸೀಟಿನಲ್ಲಿ ಕುಳಿತಿದ್ದು ಅರಣ್ಯ ಭವನದ ಬಳಿ ನಿರ್ವಾಹಕ ಯುವರಾಜ್‌ ರಾಥೋಡ್‌ರವರು ನಿರ್ವಾಹಕರ ಸೀಟನ್ನು ತೆರವು ಮಾಡುವಂತೆ ಕೇಳಿದಾಗ ಸುನಿಲ್‌ ಡ್ರ್ಯಾಗರ್‌ ರೀತಿಯ ಆಯುಧದಿಂದ ನಿರ್ವಾಹಕ ಯುವರಾಜ್‌ ರಾಥೋಡ್‌ರವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 30/12/2018ರ ರಾತ್ರಿ ಸೋಮವಾರಪೇಟೆ ಬಳಿಯ ಚೌಡ್ಲು ನಿವಾಸಿ ಸಿ.ಬಿ.ದಿನೇಶ ಎಂಬವರು ಅವರ ಸ್ನೇಹಿತ ಸದಾನಂದ ಹಾಗೂ ಕುಟುಂಬದವರೊಂದಿಗೆ ಕಾರಿನಲ್ಲಿ ಚೌಡ್ಲು ಗ್ರಾಮದ ಜಾನಕಿ ಕಲ್ಯಾಣ ಮಂಟಪದ ಬಳಿ ಹೋಗುತ್ತಿರುವಾಗ ಹಾನಗಲ್ಲು ಕಡೆಯಿಂದ ಒಂದು ಪಿಕ್‌ಅಪ್ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದಿನೇಶ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 31/12/2018ರಂದು ಸೋಮವಾರಪೇಟೆ ಬಳಿಯ ಕೂತಿ ನಿವಾಸಿ ಅನಿಲ್‌ ಕುಮಾರ್‌ ಎಂಬವರು ಸೋಮವಾರಪೇಟೆ ನಗರದಲ್ಲಿದ್ದಾಗ ಅಲ್ಲಿಗೆ ಬಸ್ಸಿನಲ್ಲಿ ಬಂದ ಅವರ ಪರಿಚಯದ ಕೌಶಿಕ್ ಎಂಬವರನ್ನು ಕಂಡು ಕೌಶಿಕ್‌ರವರು ಅನಿಲ್‌ ಕುಮಾರ್‌ರವರಿಗೆ ಕೊಡಲು ಬಾಕಿ ಇರುವ ಸಾಲದ ಹಣವನ್ನು ಕೇಳಿದ ಕಾರಣಕ್ಕೆ ಕೌಶಿಕ್‌ರವರು ಅನಿಲ್‌ ಕುಮಾರ್‌ರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 30/12/2018ರಂದು ಸಂಜೆ ಸುಂಟಿಕೊಪ್ಪ ಬಳಿಯ ಅಂದಗೋವೆ ಪೈಸಾರಿ ನಿವಾಸಿ ಪ್ರವೀಣ್‌ ಎಂಬವರು ಹರೀಶ್‌ ಎಂಬವರ ಕಾರಿನಲ್ಲಿ ಅವರ ತೋಟದಿಂದ ಹಸಿ ಕಾಫಿ ತೆಗೆದುಕೊಂಡು ಮರಳಿ ಬರುತ್ತಿರುವಾಗ ರಸ್ತೆಯಲ್ಲಿ ಶ್ರೇಯಸ್ ಎಂಬವರು ಅವರ ಬೈಕನ್ನು ಅಡ್ಡಲಾಗಿ ನಿಲ್ಲಿಸಿದ್ದು ಬೈಕನ್ನು ತೆಗೆಯುವಂತೆ ಹೇಳಿದ ಕಾರಣಕ್ಕೆ ಶ್ರೇಯಸ್, ಜೋಯ್, ನವೀನ್‌ ಮತ್ತು ಶರತ್‌ ಎಂಬವರು ಸೇರಿಕೊಂಡು ಪ್ರವೀಣ್ ಹಾಗೂ ಹರೀಶ್‌ರವರ ಮೇಲೆ ಬೇಲಿಯ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 31/12/2018ರಂದು ಗೋಣಿಕೊಪ್ಪ ಬಳಿಯ ಹಾತೂರು ನಿವಾಸಿ ಕೆ.ಎಂ.ಮಾದಪ್ಪ ಎಂಬವರು ಅವರ ಮಾರುತಿ ಓಮಿನಿ ವ್ಯಾನಿನಲ್ಲಿ ಗೋಣಿಕೊಪ್ಪ ಕಡೆಯಿಂದ ಹಾತೂರಿಗೆ ಬರುತ್ತಿರುವಾಗ ಕೈಕೇರಿ ಬಳಿ ವಿರಾಜಪೇಟೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕಿ ಪುಷ್ಪವತಿ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಾದಪ್ಪನವರ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ಮುತ್ತಪ್ಪ ಹಾಗೂ ಅಪ್ಪಣ್ಣ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡಸು ಕಾಣೆ ಪ್ರಕರಣ

ವಿರಾಜಪೇಟೆ ಬಳಿಯ ಚೆಂಬೆಬೆಳ್ಳೂರು ನಿವಾಸಿ ಜೇನುಕುರುಬರ ಚಂದ್ರ ಎಂಬಾತನು ದಿನಾಂಕ 21/12/2018ರಂದು ದೇವಣಗೇರಿಯಲ್ಲಿರುವ ಆತನ ಅಕ್ಕ ಪುಷ್ಪರವರ ಮನೆಗೆ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ಚಂದ್ರನ ಪತ್ನಿ ಎರವರ ರಾಧ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.