Crime News

ವ್ಯಕ್ತಿಯ ಆತ್ಮಹತ್ಯೆ

       ದಿನಾಂಕ 31-12-2018 ರ ರಾತ್ರಿ ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿಯಾದ ಪಣಿಯರವರ ಬೊಳಕರವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪತ್ನಿ ಮೊಣ್ಣಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಟೌವ್ ಸಿಡಿದು ಗಾಯಗೊಂಡಿದ್ದ ಮಹಿಳೆಯ ಸಾವು

          ದಿನಾಂಕ 27-12-2018 ರಂದು ಕುಶಾಲನಗರದ ನಾಗೇಗೌಡ ಬಡಾವಣೆಯ ನಿವಾಸಿ ರಾಣಿ ಎಂಬುವವರು ಅಡುಗೆ ಮಾಡುತ್ತಿರುವಾಗ ಸ್ಟೌವ್ ಸಿಡಿದು ಗಾಯಗೊಂಡಿದ್ದವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾಣಿಯವರು ದಿನಾಂಕ 31-12-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರತ್ತದೆ.

ಅಪಘಾತ ಪ್ರಕರಣ

       ದಿನಾಂಕ 01-01-2019 ರಂದು ಮಡಿಕೇರಿಯ ಸುಬ್ರಮಣ್ಯ ನಗರದ ನಿವಾಸಿ ಪ್ರಥಮ್ ಮತ್ತು ದರ್ಶನ್ ರವರು ಗೋಣಿಕೊಪ್ಪಲುವಿನಿಂದ ಮಡಿಕೇರಿಗೆ ಮೋಟಾರು ಸೈಕಲಿನಲ್ಲಿ ಬರುತ್ತಿರುವಾಗ ಕೈಕೇರಿ ಗ್ರಾಮಕ್ಕೆ ತಲುಪುವಾಗ ಎದುರುಗಡೆ ಹೋಗುತ್ತಿದ್ದ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಚಂಗಪ್ಪನವರು ಯಾವುದೇ ಸೂಚನೆ ನೀಡದೇ ಬಲಕ್ಕೆ ತಿರುಗಿಸಿದಾಗ ಬೈಕ್ ವ್ಯಾನಿಗೆ ಡಿಕ್ಕಿಯಾಗಿ ಇಬ್ಬರೂ ಬಿದ್ದು ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

           ದಿನಾಂಕ 01-01-2019 ರಂದು ಸೋಮವಾರಪೇಟೆ ತಾಲೋಕಿನ 7 ನೇ ಹೊಸಕೋಟೆಯ ನಿವಾಸಿಯಾದ ದಾಮೋಧರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ವ್ಯಕ್ತಿಯ ದುರ್ಮರಣ

          ದಿನಾಂಕ 01-01-2019 ರಂದು ಮಾದಾಪುರದ ನಿವಾಸಿ ಬೇಬಿ @ ಜೋಸೆಫ್ ಎಂಬುವವರು ಕುಶಾಲಗರದ ಬಸವನಹಳ್ಳಿಯ ಏಕದಂತ ಹೋಂಸ್ಟೇ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ತಿಮ್ಮೇಗೌಡ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ್ದು, ಗಾಯಗೊಂಡ ಬೇಬಿ @ ಜೋಸೆಫ್ ರವರು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.