Crime News

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು:

ಸೋಮವಾರಪೇಟೆ ತಾಲೋಕು ನಂಜರಾಯ ಪಟ್ಟಣ ಗ್ರಾಮದಲ್ಲಿ ದಿನಾಂಕ 29-12-2018 ರಂದು ಮೋಟಾರ್ ಸೈಕಲ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಮೋಟಾರ್ ಸೈಕಲ್ ಹಿಂಬದಿ ಸವಾರ ಮಹೇಂದ್ರ ಎಂಬವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 7-1-2019 ರಂದು ಸಾವನಪ್ಪಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ದಾಖಲಾತಿ ಸೃಷ್ಠಿಸಿ ವಂಚನೆ:

ನಾಪೋಕ್ಲು ಠಾಣಾ ವ್ಯಾಪ್ತಿಯ ಪೇರೂರು ಗ್ರಾಮದ ನಿವಾಸಿ ಮೂವೇರ ಬೋಪಣಿ ಎಂಬವರ ಆಸ್ತಿಯನ್ನು ಅವರ ಮಕ್ಕಳ ನಕಲಿ ಸಹಿಯನ್ನು ಮೂವೇರ ಎನ್. ಚಂಗಪ್ಪ ಎಂಬವರು ಮಾಡಿ ಆಸ್ತಿಯ ದಾಖಲಾತಿಗಳನ್ನು ತನ್ನ ಹೆಸರಿಗೆ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.