Crime News

ಕಳವು ಪ್ರಕರಣ

            ದಿನಾಂಕ 06-01-2019 ರಂದು ಮಡಿಕೇರಿ ತಾಲೋಕಿನ ಮದೆನಾಡು ಗ್ರಾಮದ 2ನೇ ಮೊಣ್ಣಂಗೇರಿಯ ನಿವಾಸಿ ಇಬ್ರಾಹಿಂ ಹಾಜಿ ಎಂಬವವರು ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ಮದೆನಾಡು ಗ್ರಾಮದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ KA-12 M-3059 ರ ಮಾರುತಿ ಓಮಿನಿ ವ್ಯಾನಿನ ಕಿಟಕಿಯನ್ನು ಒಡೆದು ವ್ಯಾನಿನಲ್ಲಿದ್ದ ಸ್ಟೆಪ್ನಿ, ಮ್ಯಾಟ್, ವೀಲ್ ಕವರ್ ಮತ್ತು ಟೂಲ್ಸ್ ನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

          ದಿನಾಂಕ 08-01-2019 ರಂದು ವಿರಾಜಪೇಟೆ ತಾಲೋಕಿನ ಬಾಳುಗೋಡು ಗ್ರಾಮದ ನಿವಾಸಿಯಾದ ಉತ್ತಪ್ಪ ಎಂಬುವವರು ಅನಾರೋಗ್ಯದ ಕಾರಣ ಜೀವನನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

           ದಿನಾಂಕ 08-01-2019 ರಂದು ವಿರಾಜಪೇಟೆ ತಾಲೋಕಿನ ಬಾಳಾಜಿ ಗ್ರಾಮದ ನಿವಾಸಿ ಮಾರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

             ದಿನಾಂಕ 02-01-2019 ರಂದು ಶನಿವಾರಸಂತೆಯ ಕಿತ್ತೂರು ಗ್ರಾಮದ ನಿವಾಸಿ ಮುರುಗೇಶ ಎಂಬುವವರು ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಮೋಟಾರು ಸೈಕಲಿನಲ್ಲಿ ಮನೆಯಿಂದ ಶನಿವಾರಸಂತೆಗೆ ಹೋಗುತ್ತಿರುವಾಗ ಬೆಳ್ಳಾರಳ್ಳಿ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಪ್ರಸನ್ನರವರು ಡಿಕ್ಕಿಪಡಿಸಿದ ಪರಿಣಾಮ ಮೂವರಿಗೂ ಗಾಯವಾಗಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೀರಿನಲ್ಲಿ ಮುಳುಗಿ ವ್ಯಕ್ತಿಯ ದುರ್ಮರಣ

            ದಿನಾಂಕ 08-01-2019 ರಂದು ಕೊಡ್ಲಿಪೇಟೆಯ ಬೆಂಬಳೂರು ಗ್ರಾಮದ ನಿವಾಸಿಯಾದ ಲೋಕೇಶ ಎಂಬುವವರು ತನ್ನ ಸ್ನೇಹಿತರೊಂದಿಗೆ ಕಟ್ಟೆಪುರದಲ್ಲಿರುವ ಹೇಮಾವತಿ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

            ದಿನಾಂಕ 08-01-2019 ರಂದು  ಕುಶಾಲನಗರದ ಗಂಧದಕೋಟೆಯ ನಿವಾಸಿ ಮಂಜು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪತ್ನಿ ಭಾಗ್ಯರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 08-01-2019 ರಂದು ಹೊಳೆನರಸಿಪುರದ ನಿವಾಸಿ ರಾಕೇಶ್ ಎಂಬುವರು ಸೋಮವಾರಪೇಟೆ ತಾಲೋಕಿನ ಬಿಳಿಗೇರಿ ಗ್ರಾಮದಲ್ಲಿರುವ ಮಕ್ಕಳಗುಡಿ ಬೆಟ್ಟಕ್ಕೆ ಹೋಗಿ ಬೆಟ್ಟದಲ್ಲಿರುವ ವ್ಯೂವ್ ಪಾಯಿಂಟ್ ಕಟ್ಟಡದಲ್ಲಿರುವಾಗ ಬಿಳಿಗೇರಿ ಗ್ರಾಮದ ನಿವಾಸಿಯಾದ ಕುಮಾರಸ್ವಾಮಿ ಎಂಬುವವರು ದೊಣ್ಣೆಯಿಂದ ಹಲ್ಲೆ ನಡೆಸಿ ತಲೆಗೆ ತೀವ್ರ ತರಹದ ಗಾಯಪಡಿಸಿದ್ದು, ಈ ಬಗ್ಗೆ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.