Crime News

ಹಣಕಾಸು ಸಂಸ್ಥೆಯಿಂದ ವಂಚನೆ:

ಸೋಮವಾರಪೇಟೆ ತಾಲೋಕು ಅಂದಗೋವೆ ಗ್ರಾಮದ ನಿವಾಸಿ ಮಂಜುನಾಥ ರೈ ಎಂಬವರು ಸೋಮವಾರಪೇಟೆ ನಗರದ ಯೋಗೇಶ‍್ವರಿ ಕಟ್ಟಡದಲ್ಲಿ ಎಂ.ಎಲ್ ಗಿರೀಶ್ ಎಂಬವರು ನಡೆಸುತ್ತಿದ್ದ ಹಣಕಾಸು ಸಂಸ್ಥೆಗೆ ಪ್ರತಿ ತಿಂಗಳು 500/- ರೂ ರಂತೆ 2 ಲಕ್ಷ ಹಣವನ್ನು ಪಾವತಿಸಿದ್ದು  ಸಂಸ್ಥೆಯ ಮಾಲೀಕ ಎಂ.ಎಲ್ ಗಿರೀಶ್ ರವರು ಹೆಚ್ಚಿನ ಹಣವನ್ನು ನೀಡುವಂತೆ ಭರವಸೆ ನೀಡಿ 2017ನೇ ಜೂನ್ ತಿಂಗಳಲ್ಲಿ ಸದರಿ ಹಣಕಾಸು ಸಂಸ್ಥೆಯನ್ನು ಮುಚ್ಚಿ ಇದುವರೆಗೂ ಹಣವನ್ನು ನೀಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜು:

ದಿನಾಂಕ 9-1-2019 ವಿರಾಜಪೇಟೆ ನಗರ ಠಾಣಾಧಿಕಾರಿ ಸಂತೋಶ್ ಕಶ್ಯಪ್ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸರಹದ್ದಿನ ವಿರಾಜಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದ ಹಿಂಭಾಗದ ಖಾಲಿ ಜಾಗದಲ್ಲಿ  ಮತ್ತು ವಿನಾಯಕ ನಗರದ ಬಡುವಂಡ  ಅರುಣಾ ಎಂಬವರ ಬಾಪ್ತು ಜಾಗದ ಸಮೀಪದ ತೋಡಿನ ದಡದಲ್ಲಿ  ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರ ಮೇಲೆ ದಾಳಿ ಆರೋಪಿಗಳ ವಿರುದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಾರಿ ತಡೆದು ಹಲ್ಲೆ:

ಶನಿವಾರಸಂತೆ ಠಾಣಾ ಸರಹದ್ದಿನ ಕೆರಗನಹಳ್ಳಿ ಗ್ರಾಮದ ನಿವಾಸಿ ಕೆ.ಸಿ. ರಾಮೇಗೌಡ ಎಂಬವರು ದಿನಾಂಕ 8-1-2019 ರಂದು ಕೊಡ್ಲಿಪೇಟೆ ನಗರದಲ್ಲಿರುವ ಅಂಗಡಿಗೆ ಹೋಗುತ್ತಿದ್ದಾಗ ಕುಮಾರ್ ಮತ್ತು ಪ್ರಸನ್ನ ಎಂಬವರು ಕೆ.ಸಿ. ರಾಮೇಗೌಡರವರ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.