Crime News

ಮನೆಗೆ ಹಾನಿ ಪ್ರಕರಣ

ದಿನಾಂಕ 09/01/2019ರಂದು ನಾಪೋಕ್ಲು ಬಳಿಯ ಮರಂದೋಡ ನಿವಾಸಿ ಬಿ.ಎಸ್.ಗಿರೀಶ್‌ ಎಂಬವರ ತೋಟದ ಮನೆಗೆ ಚೋಯಮಾಡಂಡ ಅಶೋಕ ಎಂಬವರು ವೈಯುಕ್ತಿಕ ದ್ವೇಷದಿಂದ ಅಕ್ರಮವಾಗಿ ಪ್ರವೇಶಿಸಿ ಮನೆಯ ಕಿಟಕಿ ಗಾಜು ಮತ್ತು ಮೇಲ್ಛಾವಣಿಯನ್ನು ಹಾನಿಗೆಡವಿ ಸುಮಾರು ರೂ. 20,000/- ಗಳಷ್ಟು ನಷ್ಟಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 09/01/2019ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ತಮಿಳರ ವಿಜಯ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಗೆ ಬೆಂಕಿ ಹಚ್ಚಿ ವ್ಯಕ್ತಿ ಆತ್ಮಹತ್ಯೆ

ದಿನಾಂಕ 10/01/2019ರಂದು ಕುಟ್ಟ ಬಳಿಯ ಕೋತೂರು ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಶ್ರೀದೇವಿ ಎಂಬವರ ಪತಿ ಟಿ.ಎಲ್. ಸುರೇಂದ್ರ ಎಂಬಾತನು ಶ್ರೀದೇವಿಯವರ ಮನೆಗೆ ಬೆಂಕಿ ಹಚ್ಚಿದ್ದು ನಂತರ ತಾನು ಕ್ರಿಮಿ ನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಸುರೇಂದ್ರನು ತನಗೆ ಯಾವುದೇ ಕೆಲಸ ಸಿಗದ ಕಾರಣ ಬೇಸರಗೊಂಡು ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 09/01/2019ರಂದು ಸೋಮವಾರಪೇಟೆ ಬಳಿಯ ಕಾಜೂರು ನಿವಾಸಿ ಎಂ.ಪದ್ಮ ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ಪುಷ್ಪ, ನಿರ್ಮಲ ಮತ್ತು ಬಾಬು ಎಂಬವರು ಜಾಗದ ವಿಚಾರದಲ್ಲಿ ಜಗಳವಾಡಿ ಪುಷ್ಪರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 10/01/2019ರಂದು ಕುಶಾಲನಗರ ಪಟ್ಟಣದ ನಾಗೇಗೌಡ ಬಡಾವಣೆ ನಿವಾಸಿ ಶಿವಮ್ಮ ಎಂಬವರು ಅವರ ಪರಿಚಯಸ್ಥರ ಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಡ್ಯಾನಿಯಲ್ ಜೋಸೆಫ್ ಎಂಬವರು ಸುಮಾರು ನಾಲ್ಕೈದು ನಾಯಿಗಳನ್ನು ಹಿಡಿದುಕೊಂಡು ಬರುತ್ತಿದ್ದು ಶಿವಮ್ಮನವರನ್ನು ನಾಯಿಗಳು ಕಚ್ಚು ಬಂದಾಗ ಶಿವಮ್ಮರವರು ನಾಯಿಗಳನ್ನು ಹೆದರಿಸಲು ನಾಯಿಗಳಿಗೆ ಕಲ್ಲೆಸೆದರೆಂಬ ಕಾರಣಕ್ಕೆ ಡ್ಯಾನಿಯೆಲ್ ಜೋಸೆಫ್‌ರವರು ಶಿವಮ್ಮರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.