Crime News

ರಸ್ತೆ ಅಪಘಾತ

ದಿನಾಂಕ 11/01/2019ರಂದು ಹೊದ್ದೂರು ನಿವಾಸಿ ಪುರುಷೋತ್ತಮ ಬಿ.ಎಂ. ಎಂಬವರು ಮೂರ್ನಾಡಿನಿಂದ ಮಡಿಕೇರಿ ಕಡೆಗೆ ಅವರ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಮೇಕೇರಿ ಬಳಿ ಎದುರಿನಿಂದ ಕೆಎ-12-ಎಂ-2800ರ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಪುರುಷೋತ್ತಮರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಪುರುಷೋತ್ತಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಪೊನ್ನಂಪೇಟೆ ಬಳಿಯ ಮಲ್ಲಂಗೇರಿ ಗ್ರಾಮದ ವಡ್ಡರಮಾಡು ನಿವಾಸಿ ಜೇನುಕುರುಬರ ಅಯ್ಯಪ್ಪ ಎಂಬವರು ದಿನಾಂಕ 08/01/2019 ರಂದು ಜೇನುಕುರುಬರ ಕರಿಯ ಮತ್ತು ಬಸವ ಎಂಬವರೊಂದಿಗೆ ಸೌದೆ ತರಲೆಂದು ಹೋದವರು ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ

ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ಗ್ಲೆನ್‌ ಲೋರ್ನಾ ತೋಟದ ನಿವಾಸಿ ಷಣ್ಮುಗ ತಾಯಿ ಎಂಬವರ ಮಗ ಅಯ್ಯಪ್ಪನ್ ಎಂಬವರ ಪತ್ನಿ ಮಗೇಶ್ವರಿ ಹಾಗೂ ಮಗ ಕಲೈಅರಸ್ ಎಂಬ ನಾಲ್ಕು ವರ್ಷದ ಬಾಲಕ ದಿನಾಂಕ 21/12/2018ರಂದು ಊರಿಗೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 10/01/2019ರಂದು ಕುಶಾಲನಗರ ಬಳಿಯ ಗೊಂದಿಬಸವನ ಹಳ್ಳಿ ನಿವಾಸಿ ಗಣೇಶ ಎಂಬವರು ಗೊಂದಿ ಬಸವನಹಳ್ಳಿ ಗ್ರಾಮದ ಸುರೇಶ ಎಂಬವರ ಹೊಸದಾಗಿ ಕಟ್ಟುತ್ತಿರುವ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಗಣೇಶರವರು ವಿಪರೀತ ಮದ್ಯ ವ್ಯಸನಿಯಾಗಿದ್ದು ಅವರ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 11/101/2019ರಂದು ಸುಂಟಿಕೊಪ್ಪ ಬಳಿಯ ಗದ್ದೆಹಳ್ಳ ನಿವಾಸಿ ಸುನಿಲ್‌ ಕುಮಾರ್‌ ಎಂಬವರು ಮಧುರಮ್ಮ ಬಡಾವಣೆಯಲ್ಲಿರುವ ಅವರ ಅತ್ತೆ ಪುಷ್ಪ ಎಂಬವರ ಮನೆಗೆ ಹೋಗಿದ್ದಾಗ ಮಧುರಮ್ಮ ಬಡಾವಣೆಯ ನಿವಾಸಿಗಳಾದ ಪ್ರಸಾದ್‌ ಮತ್ತು ಸೈದು ಎಂಬವರು ರಸ್ತೆ ವಿಚಾರದಲ್ಲಿ ಜಗಳವಾಡಿ ಕಲ್ಲಿನಿಂದ ಹಲ್ಲೆ ಮಾಡಿ ಸುನಿಲ್‌ ಕುಮಾರ್‌ರವರಿಗೆ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/01/2019ರಂದು ಪಿರಿಯಾಪಟ್ನದ ಸುಂಕದಹಳ್ಳಿ ನಿವಾಸಿ ಎಸ್‌.ಕೆ.ನವೀನ್‌ ಕುಮಾರ್ ಎಂಬವರು ಅವರ ಮೋಟಾರು ಬೈಕಿನಲ್ಲಿ ಅವರ ಸ್ನೇಹಿತ ಚೆಲುವರಾಜು ಎಂಬವರೊಂದಿಗೆ ಕುಶಾಲನಗರ ಮಾರ್ಗವಾಗಿ ಚೆಟ್ಟಳ್ಳಿ ಕಡೆಗೆ ಹೋಗುತ್ತಿರುವಾಗ ಕುಶಾಲನಗರದ ಬ್ಲೂ ಮೂನ್ ಪೆಟ್ರೋಲ್ ಬಂಕ್ ಬಳಿ ಹಿಂದಿನಿಂದ ಯಾವುದೋ ಒಂದು ಪಿಕ್‌ ಅಪ್‌ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನವೀನ್‌ ಕುಮಾರ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನವೀನ್‌ ಕುಮಾರ್‌ ಮತ್ತು ಚೆಲುವರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.