Crime News

ಹಲ್ಲೆ ಪ್ರಕರಣ

ದಿನಾಂಕ 11/01/2019ರಂದು ಸುಂಟಿಕೊಪ್ಪದ ಮಧುರಮ್ಮ ಬಡಾವಣೆ ನಿವಾಸಿ ಪ್ರಸಾದ್‌ ಎಂಬವರಿಗೆ ಹಾಗೂ ಸೈಯದ್ ಎಂಬವರಿಗೆ ಸುಂಟಿಕೊಪ್ಪದ ಸುನಿಲ್‌ ಕುಮಾರ್ ಎಂಬವರು ರಸ್ತೆ ಕಾಮಗಾರಿ ವಿಚಾರವಾಗಿ ಜಗಳವಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಸೋಮವಾರಪೇಟೆ ನಗರದ ಎಂ.ಡಿ. ಬ್ಲಾಕ್ ನಿವಾಸಿ ಮಾರ್ಷಲ್ ಡಿಸೋಜಾ ಎಂಬವರು 28/12/2018ರಿಂದ ಮನೆಯಲ್ಲಿಲ್ಲದೆ ಕಾಣೆಯಾಗಿರುವುದಾಗಿ ಅವರ ಪತ್ನಿ ಕುಮುದಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 05/01/2019ರಂದು ಹಾಸನ ಜಿಲ್ಲೆಯ ಆಲೂರಿನ ಕೆ.ಹೊಸಕೋಟೆ ನಿವಾಸಿ ಶರತ್ ಎಂಬವರು ಸೋಮವಾರಪೇಟೆ ನಗರದ ಗಣೇಶ್‌ ಎಂಬವರೊಂದಿಗೆ ಗಣೇಶ್‌ರವರ ಓಮಿನಿ ವ್ಯಾನಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಕುಸುಬೂರು ಗ್ರಾಮದ ಕೋವರ್‌ಕೊಲ್ಲಿ ಜಂಕ್ಷನ್ ಬಳಿ ಗಣೇಶ್‌ರವರು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ  ವ್ಯಾನು ರಸ್ತೆಯಲ್ಲಿ ಮಗುಚಿಬಿದ್ದು ಶರತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 11/01/2019ರ ರಾತ್ರಿ ವೇಳೆ ಕುಟ್ಟ ಬಳಿಯ ಕುರ್ಚಿ ಗ್ರಾಮದ ನಿವಾಸಿ ಪಂಜರಿಎರವರ ಮೀನಾ ಎಂಬ ಮಹಿಳೆಯು ಕಾಫಿ ತೋಟದಲ್ಲಿನ ಸಿಲ್ವರ್ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದು ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.