Crime News

ಮಾದಕ ವಸ್ತುಗಳ ವಶ      

         ದಿನಾಂಕ 13-01-2019 ರಂದು ಮಡಿಕೇರಿ ತಾಲೋಕಿನ ನೆಲಜಿ ಗ್ರಾಮದ ‘ನೆಲಜಿ ಗ್ಲಾಪಿಂಗ್’ ಹೋಂಸ್ಟೇಯಲ್ಲಿ ರೇವ್ ಪಾರ್ಟಿಯನ್ನು ಬಾಂಬೆ ಹಾಗೂ ಬೆಂಗಳೂರು ಮೂಲದ ವ್ಯಕ್ತಿಗಳು ಆಯೋಜಿಸಿ ಮಾದಕ ವಸ್ತುಗಳಾದ ಗಾಂಜಾ, ಚರಸ್ ಗಳನ್ನು ಹಂಚುವ ಸಲುವಾಗಿ ಶೇಖರಿಸಿಟ್ಟುಕೊಂಡಿದ್ದನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಯವರು ದಾಳಿ ಮಾಡಿ ಪತ್ತೆಹಚ್ಚಿದ್ದು, ಮಹಾರಾಷ್ಟ್ರ ರಾಜ್ಯದ ಜೂಡ್ ಪರೇರಾ ಮತ್ತು ಶಂಕರ್ ಶಾಂತನು, ಬೆಂಗಳೂರಿನ ಸಾಯಿರಾಮ್ ರಮೇಶ್ ಮತ್ತು ಎಂ. ವಿ ಈಶ್ವರ್ ಹಾಗೂ ಹೋಂಸ್ಟೇ ಮಾಲಿಕ ಅಪ್ಪಣ್ಣರವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 205.15 ಗ್ರಾಂ ಗಾಂಜಾ ಸೊಪ್ಪು, 29 ಗ್ರಾಂ ಚರಸ್, ನಗದು ರೂ 1,75,000, ಮೊಬೈಲ್ ಫೋನ್, ಮ್ಯೂಸಿಕ್ ಸಿಸ್ಟಂ, ಅಶೋಕ ಲೈಲಂಡ್ ಮಿನಿ ಲಾರಿಯನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

           ದಿನಾಂಕ 12-01-2019 ರಂದು ಮಡಿಕೇರಿ ತಾಲೋಕಿನ ಕೆ. ನಿಡುಗಣೆ ಗ್ರಾಮದ ನಿವಾಸಿಯಾದ ಕಾವೇರಪ್ಪ ಎಂಬುವವರು ಚಂದನ್ ರವರೊಂದಿಗೆ ಜೀಪಿನಲ್ಲಿ ಮಡಿಕೇರಿಯಿಂದ ಮನೆಗೆ ಹೋಗುತ್ತಿರುವಾಗ ಭಗವತಿ ನಗರದಲ್ಲಿ ಮಡಿಕೇರಿ ನಗರದ ನಿವಾಸಿಗಳಾದ ಅಚ್ಚಯ್ಯ, ಅಯ್ಯಪ್ಪ ಹಾಗೂ ನಿಖಿಲ್ ಆಳ್ವರವರು ಹಳೇ ದ್ವೇಷದಿಂದ ತಡೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

          ದಿನಾಂಕ 12-01-2019 ರಂದು ಕುಶಾಲನಗರದ ಗಂಧದಕೋಟೆಯ ನಿವಾಸಿಯಾದ ಮಹಮ್ಮದ್ ಎಂಬುವವರು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರದೀಪ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಲತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ರವರಿಗೆ ಡಿಕ್ಕಿಪಡಿಸಿ ಗಾಯಪಡಿಸಿದ್ದು, ಬೈಕ್ ಸವಾರ ಹಾಗೂ ಹಿಂಬದಿ ಸವಾರನಿಗೂ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರು ಅಪಘಾತ

         ದಿನಾಂಕ 12-01-2019 ರಂದು ಮೈಸೂರಿನ ಕುವೆಂಪು ನಗರದ ನಿವಾಸಿಯಾದ ನಾಗರಾಜು ಎಂಬುವವರು ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿರುವಾಗ ಸುಂಟಿಕೊಪ್ಪಕ್ಕೆ ತಲುಪುವಾಗ ಚಾಲಕ ಮಹೇಶರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಕಲ್ಲಿಗೆ ಡಿಕ್ಕಿಹೊಡೆದ ಪರಿಣಾಮ ಕಾರು ಜಖಂಗೊಂಡು ನಾಗರಾಜುರವರಿಗೆ ಗಾಯವಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

     ದಿನಾಂಕ 09-01-2019 ರಂದು ಸೋಮವಾರಪೇಟೆ ತಾಲೋಕಿನ ಮೂವತ್ತೋಕ್ಲು ಗ್ರಾಮದ ನಿವಾಸಿಯಾದ ಪೂವಯ್ಯನವರು ಮನನೊಂದು ವಿಷ ಪದಾರ್ಥ ಸೇವಿಸಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿಯ ವೈವಾಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಪೂವಯ್ಯನವರು ದಿನಾಂಕ 13-01-2019 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 11-01-2019 ರಂದು ಸೋಮವಾರಪೇಟೆ ತಾಲೋಕಿನ ರಂಗಸಮುದ್ರದ ನಿವಾಸಿಯಾದ ರಾಜು ಎಂಬುವವರಿಗೆ ಹೊಸಪಟ್ಟಣ ಗ್ರಾಮದ ನಿವಾಸಿಯಾದ ಕಂದ ಎಂಬುವವರು ಕ್ಲುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.