Crime News

ಜೂಜಾಟ ಪ್ರಕರಣ

            ದಿನಾಂಕ 14-01-2019 ರಂದು ಸೋಮವಾರಪೇಟೆ ಠಾಣೆಯ ಪಿ.ಎಸ್.ಐ ಶಿವಶಂಕರ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ನಗರದ ಎಂ.ಡಿ ಬ್ಲಾಕಿನಿಂದ ಹೊಸ ಬಡಾವಣೆಗೆ ಹೋಗುವ ಕಾಲು ದಾರಿಯಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆಟವಾಡುತ್ತಿದ್ದ ಶಾಂತಕುಮಾರ್,ಉತ್ತಯ್ಯ ಮತ್ತು ಚಂದ್ರರವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ನಗದು ಹಣ 13,100=00 ರೂವನ್ನು ವಶಪಡಿಸಿಕೊಂಡಿದ್ದು, ಚೆನ್ನ, ಕೃಷ್ಣ, ಉದಯರವರು ಓಡಿಹೋಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

               ದಿನಾಂಕ 14-01-2019 ರಂದು ಕೊಡ್ಲಿಪೇಟೆ ನಗರದ ನಿವಾಸಿ ಭಾಗ್ಯಮ್ಮ ಎಂಬುವವರು ಮನೆಯ ಹಿಂದೆ ಇರುವ ಟ್ಯಾಂಕ್ ಬಳಿ ನೀರನ್ನು ಹಿಡಿಯುತ್ತಿರುವಾಗ ಪಕ್ಕದ ಮನೆ ನಿವಾಸಿಯಾದ ಅಣ್ಣೇಗೌಡ ಮತ್ತು ಅವರ ಪತ್ನಿ ಮಂಜುಳಾರವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಭಾಗ್ಯಮ್ಮನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂಜಾಟ ಪ್ರಕರಣ

            ದಿನಾಂಕ 14-01-2019 ರಂದು ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ ಸಂತೋಷ್ ಕಶ್ಯಪ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ವಿರಾಜಪೇಟೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮುಂದುಗಡೆ ಇರುವ ಶ್ರೀ ದುರ್ಗಾ ಸ್ವೀಟ್ಸ್ ಬೇಕರಿ ಮತ್ತು ಕೂಲ್ ಬಾರ್ ನಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳ ಅದೃಷ್ಟ ಸಂಖ್ಯೆಯನ್ನು ಅವಲಂಬಿಸಿ ಅಂಕಗಳ ಮೇಲೆ ಹಣವನ್ನು ಕಟ್ಟಿ ಜೂಜಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಆಟವಾಡುತ್ತಿದ್ದ ಅಶೋಕ್ ಕುಮಾರ್, ಶಿವಲಿಂಗ ಮತ್ತು ಅನಿಲ್ ಕುಮಾರ್ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು 43,295 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.