Crime News

ಬಂದೂಕಿನ ತೋಟಗಳ ಮಾರಾಟಕ್ಕೆ ಯತ್ನ

                ದಿನಾಂಕ 15-01-2019 ರಂದು ಮಡಿಕೇರಿ ನಗರದಲ್ಲಿ ಅರ್ವತ್ತೋಕ್ಲು ಗ್ರಾಮದ ಪೂವಯ್ಯ ಹಾಗೂ ಸೂರಿ ಎಂಬುವವರು ಕೇರಳ ರಾಜ್ಯದ ನಿವಾಸಿಯಾದ ಪ್ರಾನ್ಸಿಸ್ @ ಮಾಣಿ ಎಂಬುವವರಿಗೆ ಅಕ್ರಮವಾಗಿ 263 ಬಂದೂಕು ತೋಟಗಳನ್ನು ಮಾರಲು ಪ್ರಯತ್ನಿಸುತ್ತಿದ್ದವರನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಯವರು ಪತ್ತೆಹಚ್ಚಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

             ದಿನಾಂಕ 14-01-2019 ರಂದು ವಿರಾಜಪೇಟೆ ತಾಲೋಕಿನ ಬೆಸಗೂರು ಗ್ರಾಮದ ನಿವಾಸಿಯಾದ ಅರುಣರವರಿಗೆ ಕ್ಷುಲ್ಲಕ ಕಾರಣಕ್ಕೆ ಕಾಮಾರಾಜ್, ಶಕು, ಶಾಂತ, ಕಸ್ತೂರಿ, ಮಮತ, ಮತ್ತು ಇತರರು ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ವಶ

           ದಿನಾಂಕ 15-01-2019 ರಂದು ವಿರಾಜಪೇಟೆ ನಗರದ ಪಿಎಸ್ಐ ರವರಾದ ಸಂತೋಷ್ ಕಶ್ಯಪ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಠಾಣಾ ಸರಹದ್ದಿನ ಅರ್ಜಿ ಗ್ರಾಮದ ಪೆರಂಬಾಡಿ ಚೆಕ್ ಪೋಸ್ಟ್ ಸಮೀಪದ ಅಲ್ ಶಿಫಾ ಹೋಟೆಲ್ ಬಳಿ KL-58-B-TEMP-3118 ರ ಕಾರಿನಲ್ಲಿ ಕೇರಳ ರಾಜ್ಯದ ನಿವಾಸಿಗಳಾದ ಹನೀಫ್, ಸಾನಿದ್, ಅಸ್ಗರ್, ಶಹಜಾನ್, ಅನ್ವರ್ ರವರು ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸಿದ್ದವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 300 ಗ್ರಾಂ ನಷ್ಟು ಗಾಂಜಾ ಹಾಗೂ ನಗದು ಹಣ 3,000 ರೂ ವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕಾಫಿ ಕಳ್ಳತನ

          ದಿನಾಂಕ 11-01-2019 ರಂದು ನಿಟ್ಟೂರು ಗ್ರಾಮದ ದೇವಯ್ಯ ಎಂಬುವವರ ತೋಟದಿಂದ ವಿನೀಶ್, ಪೊನ್ನಪ್ಪ ಹಾಗೂ ಇತರರು ಅಂದಾಜು 45 ಚೀಲದಷ್ಟು ಹಸಿ ಕಾಫಿಯನ್ನು ಕುಯಿದು ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.