Crime News

ಮಹಿಳೆ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು ಗ್ರಾಮದ ನಿವಾಸಿ ಶ್ರೀಮತಿ ಮೇನಕ ಎ.ಟಿ. ರವರು ದಿನಾಂಕ 14-1-2019 ರಂದು ತಮ್ಮ ಮನೆಯ ಸ್ನಾನದ ಮನೆಯನ್ನು ಉಪಯೋಗಿಸಿದ ವಿಚಾರದಲ್ಲಿ ಅವರ ಸೊಸೆ ಶ್ರೀಮತಿ ಸವಿತಾ ಎಂಬವರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದಾರೆಂದು ನೀಡಿದ ದೂರಿನ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಸಿದು ಬಿದ್ದು ಕಾರ್ಮಿಕ ಸಾವು:

ಕುಶಾಲನಗರದ ಸಮೀಪದ ಕೂಡಿಗೆ ಯಲ್ಲಿ ವಾಸವಾಗಿರುವ ಕೆ.ಟಿ. ಗಿರೀಶ್ ಎಂಬವರಲ್ಲಿ ಕಾಂಕ್ರಿಟ್ ಕೆಲಸ ಮಾಡುವ ಶಂಕರ ಎಂಬವರು ದಿನಾಂಕ 16-1-2019 ರಂದು ಕೂಡಿಗೆ ಗ್ರಾಮದ ಚಂದ್ರ ಎಂಬವರ ಅಂಗಡಿ ಮುಂದುಗಡೆ ಕುಸಿದು ಬಿದ್ದು ಸಾವನಪ್ಪಿದ್ದು, ಕೆ.ಟಿ. ಗಿರೀಶ‍್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಫಿ ಮಾರಾಟದ ವಿಷಯದಲ್ಲಿ ಜಗಳ:

ಶನಿವಾರಸಂತೆ ಠಾಣಾ ಸರಹದ್ದಿನ ಮೂದರವಳ್ಳಿ ಗ್ರಾಮದ ನಿವಾಸಿ ದರ್ಶನ್ ಎಂಬವರು ದಿನಾಂಕ 16-1-2019 ರಂದು ತಮ್ಮ ಕಾಫಿ ಕಣದಲ್ಲಿ ಒಣಗಿಸಿದ ಕಾಫಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಚೀಲದಲ್ಲಿ ತುಂಬಿಸುತ್ತಿದ್ದಾಗ ಆತನ ಸಹೋದರ ಸಂತೋಶ್ ಎಂಬಾತ ಅಲ್ಲಿಗೆ ಬಂದು ಕಾಫಿ ಮಾರಾಟ ವಿಷಯದಲ್ಲಿ ಜಗಳ ಮಾಡಿ ದರ್ಶನ್ ರವರ ತಲೆಯ ಭಾಗಕ್ಕೆ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ  ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಐಕೊಳ ಗ್ರಾಮದ ನಿವಾಸಿ ಪಿ. ಸಾದುಲಿ ಎಂಬವರು ದಿನಾಂಕ 16-1-2019 ರಂದು ಸಂಜೆ 8-15 ಗಂಟೆ ಸಮಯದಲ್ಲಿ ಮಸೀದಿಯಲ್ಲಿ ನಮಾಜ್ ಮುಗಿಸಿ ಬರುತ್ತಿದ್ದಾಗ ಮಸೀದಿಯ ಹೊರಗಡೆ ಅದೇ ಗ್ರಾಮದ ಆಶೀಸ್ ಮತ್ತು ಮುಸ್ತಫಾರವರುಗಳ  ಮಕ್ಕಳು ಮಸೀದಿಯ ಬಾಗಿಲಿನ ಬೋಲ್ಟ್  ಮುರಿದ ವಿಚಾರದಲ್ಲಿ ಅವರ ಮಕ್ಕಳಲ್ಲಿ ಕೇಳಿದ ಕಾರಣಕ್ಕೆ ಆಸೀಸ್ ಮತ್ತು ಮುಸ್ತಫಾ ರವರು ಜಗಳ ಮಾಡಿ ಹಲ್ಲೆ ನಡೆಸಿ ನೊವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.