Crime News

ಮೋಟಾರು ಸೈಕಲ್ ಅಪಘಾತ

             ದಿನಾಂಕ 17-01-2019 ರಂದು ಸೋಮವಾರಪೇಟೆ ತಾಲೋಕಿನ ಗರಗಂದೂರು ಗ್ರಾಮದ ನಿವಾಸಿಯಾದ ಶಿವನ್ ಎಂಬುವವರೊಂದಿಗೆ ಮಣಿಕಂಠ ಮತ್ತು ಪುನಿತ್ ರವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಕೊಡಗರಹಳ್ಳಿ ಎಂಬಲ್ಲಿಗೆ ತಲುಪುವಾಗ ಶಿವನ್ ರವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಪಕ್ಕ ಇದ್ದ ಮೋರಿಗೆ ಡಿಕ್ಕಿಪಡಿಸಿದ ಪರಿಣಾಮ ಮೂವರಿಗೂ ಗಾಯಗಳಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 18-01-2019 ರಂದು ಸೋಮವಾರಪೇಟೆ ತಾಲೋಕಿನ ಕನ್ನಳ್ಳಿ ಗ್ರಾಮದ ನಿವಾಸಿಗಳಾದ ಜಗದೀಶ್, ಮೋನಾಕ್ಷಿ ಹಾಗೂ ಗಂಧರ್ವ, ಪೊನ್ನಪ್ಪರವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

           ದಿನಾಂಕ 18-01-2019 ರಂದು ವಿರಾಜಪೇಟೆ ತಾಲೋಕಿನ ನಾಲ್ಕೇರಿ ಗ್ರಾಮದ ನಿವಾಸಿಯಾದ ಸುಬ್ಬಯ್ಯ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ 18-01-2019 ರಂದು ವಿರಾಜಪೇಟೆ ತಾಲೋಕಿನ ಬಾಳುಗೋಡು ಗ್ರಾಮದ ನಿವಾಸಿಯಾದ ಉದಯರವರಿಗೂ ಮತ್ತು  ಬಿಟ್ಟಂಗಾಲ ಗ್ರಾಮದ ನಿವಾಸಿಗಳಾದ ಸಣ್ಣಪ್ಪ, ವೇಣು, ಅಕ್ಷತ್ ಮತ್ತು ಇತರರಿಗೂ ಆಸ್ತಿಯ ವಿಚಾರದಲ್ಲಿ ಜಗಳವಾಗಿ ಉದಯರವರಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.