Crime News

ಮೋಟಾರ್ ಸೈಕಲ್‍ಗೆ ಲಾರಿ ಡಿಕ್ಕಿ:

ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ವಾಸವಾಗಿರುವ ಎನ್. ಭರತ್ ಎಂಬವರು ದಿನಾಂಕ 19-1-2019 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಮಡಿಕೇರಿ ನಗರದಿಂದ ಸುದರ್ಶನ ವೃತ್ತದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾಗಿ ಎನ್‍. ಭರತ್ ನವರ ಕಾಲು, ಸೊಂಟ ಮತ್ತು ಬಲ ಕೈಗೆ ಗಾಯವಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹೀಂದ್ರ ರೆಸಾರ್ಟ್ ನಲ್ಲಿ ತಂಗಿದ್ದ ಕೋಣೆಯಿಂದ ಕಳ್ಳತನ:

ಉತ್ತರಪ್ರದೇಶದ ಕಾನ್ಫುರದ ನಿವಾಸಿ ಡಾ:ಅಜಯ್ ಬಾಜಪೆ ಎಂಬವರು ತನ್ನ ಸ್ನೇಹಿತನೊಂದಿಗೆ ಮಡಿಕೇರಿ ಸಮೀಪದ ಗಾಳಿಬೀಡುವಿನಲ್ಲಿರುವ ಮಹೀಂದ್ರ ರೆಸಾರ್ಟ್‍ನಲ್ಲಿ ದಿನಾಂಕ 18-1-2019 ರಂದು ತಂಗಿದ್ದು, ಯಾರೋ ಕಳ್ಳರು ಸದರಿಯವರು ತಂಗಿದ್ದ ಕೋಣೆಯಿಂದ 2 ಲಕ್ಷ ಹಣ ನಗದನ್ನು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೂಲಿ ಹಣದ ವಿಷಯದಲ್ಲಿ ಹಲ್ಲೆ:

ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮದ ಮಲ್ಲೇನಳ್ಳಿ ಗ್ರಾಮದ ಶ್ರೀಮತಿ ಭಾಗ್ಯಮ್ಮ ಎಂಬವರು ದಿನಾಂಕ 4-8-2018  ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದ ಪ್ರಭಾಕರ ಎಂಬವರ ಮನೆಗೆ ಕೂಲಿ ಹಣ ಕೇಳಲು ಹೋಗಿದ್ದು ಆ ವಿಚಾರದಲ್ಲಿ ಪ್ರಭಾಕರ, ರಾಜ ಲಕ್ಷ್ಮಿ ಹಾಗು ಸುದಾಕರ ರವರು ಜಗಳ ಮಾಡಿ ಹಲ್ಲೆ ಮಾಡಿ ಕೊಲೆ ಬೆದರಿಕಿ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಅಪಘಾತ ಸವಾರರಿಬ್ಬರಿಗೆ ಗಾಯ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದವರಾದ ಸಾಬು ಹಾಗು ನಾಗೇಶ ಎಂಬವರು ದಿನಾಂಕ 19-1-2019 ರಂದು ಮೋಟಾರ್ ಸೈಕಲಿನ್ನಲ್ಲಿ ಗೋಣಿಕೊಪ್ಪದಿಂದ ಕೈಕೇರಿ ಕಡೆಗೆ ಹೋಗುತ್ತಿದ್ದಾಗ ಮೋಟಾರ್ ಸೈಕಲಿನ ಸವಾರ ಸಾಬು ಸದರಿ ಮೋಟಾರ್‍ ಸೈಕಲನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಮೋರಿಯೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸಾಬು ಹಾಗು ನಾಗೇಶರವರು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಬಾಚಳ್ಳಿ ಗ್ರಾಮದ ನಿವಾಸಿ ಶ್ರೀಮತಿ ತಂಗಮ್ಮ ಎಂಬವರ ಪತಿ ಟಿ.ಎಇ. ಚಿಣ್ಣಪ್ಪ ಎಂಬವರು ದಿನಾಂಕ 19-1-2019 ರಂದು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಪತ್ನಿ ಶ್ರೀಮತಿ ತಂಗಮ್ಮನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪತಿಯಿಂದ ಪತ್ನಿಗೆ ವರದಕ್ಷಿಣೆಗಾಗಿ  ಕಿರುಕುಳ:

ಸೋಮವಾಋಪೇಟೆ ತಾಲೋಕು ಚೌಡ್ಲು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಗುಲ್ಜಾರ್ ಬಾನು ರವರು 20 ವರ್ಷಗಳ ಹಿಂದೆ ಜಹೀರ್ ಅಹಮ್ಮದ್ ಎಂಬವರನ್ನು ಮದುವೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಹಣವನ್ನು ತವರು ಮನೆಯಿಂದ ತರುವಂತೆ ಸದರಿ ಜಹೀರ್ ಅಹಮ್ಮದ್ ರವರು ಪತ್ನಿ ಶ್ರೀಮತಿ ಗುಲ್ಜಾರ್ ಬಾನು ರವರಿಗೆ ಪೀಡಿಸುತ್ತಿರುವುದಾಗಿ ಮತ್ತು ಮಾನಸಿಕ ಮತ್ತು ದೈಹಿಕ ಹಿಂಸೆ ನಿಡುತ್ತಿರುವುದಾಗಿ  ಹಲ್ಲದೆ ಮನೆಯಲ್ಲಿದ್ದ 2 ಕಬ್ಬಿನ ಹಾಲಿನ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದು ಅದನ್ನು ಕೇಳಿದ ಕಾರಣಕ್ಕೆ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.