Crime News
ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:
ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಪಿ.ವೈ. ಕುಶ ಎಂಬವರು ದಿನಾಂಕ 20-1-2019 ರಂದು ಭಾಗಮಂಡಲದ ಮಾರ್ಕೇಟ್ ಬಳಿ ಹೋಗುತ್ತಿದ್ದಾಗ ಅಜಯ್ ಎಂಬವರು ದಾರಿಯನ್ನು ತಡೆದು ಹಳೆ ದ್ವೇಷದಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಪುಕಟ್ಟಿಕೊಂಡು ಬಂದು ವ್ಯಕ್ತಿ ಮೇಲೆ ಹಲ್ಲೆ:
ಮಡಿಕೇರಿ ತಾಲೋಕು ಎಮ್ಮೆಮಾಡು ಗ್ರಾಮದ ನಿವಾಸಿ ಶೌಕತ್ ಆಲಿ ಎಂಬವರು ದಿನಾಂಕ 20-1-2019 ರಂದು ಎಸ್.ಎಸ್.ಎಫ್. ವತಿಯಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪೂರ್ವಸಿದ್ದತೆ ಪರೀಕ್ಷೆಯನ್ನು ಎಮ್ಮೆಮಾಡು ಪ್ರೌಢಶಾಲೆಯಲ್ಲಿ ನಡೆಸುತ್ತಿದ್ದಾಗ ಎಮ್ಮೆಮಾಡು ಗ್ರಾಮದವರಾದ ಮಾಯನೆ ಮೂಸೆ, ಆಲಿ ಕಾಳೇರ, ಜೌಹರ್ ಕಾಳೇರ, ಜಲೀಲ್ ನೆರೂಟ್, ಶೌಕತ್ ಕಾಳೇರ ಮತ್ತು ನೌಶಾದ್ ಚಕ್ಕರ ರವರುಗಳು ಅಕ್ರಮಕೂಟ ಸೇರಿಕೊಂಡು ಪರೀಕ್ಷೆ ನಡೆಸುತ್ತಿರುವ ಎಮ್ಮೆಮಾಡು ಶಾಲೆಗೆ ಬಂದು ಹಲ್ಲೆನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ:
ದಿನಾಂಕ 20-1-2019 ರಂದು ಎಮ್ಮೆಮಾಡು ಗ್ರಾಮದ ನಿವಾಸಿ ಎಂ.ಎಸ್. ಮೂಸ ರವರ ಮಗಳಾದ ನುಸೈಬಳನ್ನು ಆಕೆ ವ್ಯಾಸಂಗ ಮಾಡುತ್ತಿರುವ ಎಮ್ಮೆಮಾಡು ಪ್ರೌಡ ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ತಿಳಿಸಿ ಆಕೆಯನ್ನು ಬೆಳಿಗ್ಗೆ ಯಿಂದ ಅಪರಾಹ್ನ 3-00 ಗಂಟೆಯವರೆಗೂ ಪರೀಕ್ಷೆಯನ್ನು ಮಾಡಿಸದೆ ಸುಮ್ಮನೆ ಕೂರಿಸಿದ್ದು ಇದನ್ನು ವಿಚಾರಸಿದ ಆಕೆಯ ತಂದೆ ಎಂ.ಎಸ್. ಮೂಸರವರ ಮೇಲೆ ಸಿ.ಹೆಚ್.ಮೊಯಿದು, ಸೌಕತ್, ಜಕರಿಯಾ ಜೌಹರಿ, ನಜೀರ್ ಬಾಕವಿ ಮತ್ತು ಇತರೆ 6 ಮಂದಿ ಸೇರಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.
ಚಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿ ಕೊಲೆಗೆ ಯತ್ನ:
ಹಾಸನ ಜಿಲ್ಲೆಯ ಬೆಟ್ಟಗಳಲೆ ಗ್ರಾಮದ ಸಿ. ನಿಕಲೋಸ್ ಎಂಬವರು ದಿನಾಂಕ 20-1-2019 ರಂದು ತನ್ನ ತಂಗಿಯೊಂದಿಗೆ ಮೋಟಾರ್ ಸೈಕಲಿನಲ್ಲಿ ಆಲೂರು ಸಿದ್ದಾಪುರದಿಂದ ಹೋಗುತ್ತಿದ್ದಾಗ ಭುವಂಗಾಲ ಗ್ರಾಮದ ರಾಕೇಶ್ ಎಂಬವರು ನಿಕಲೋಸ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಮಾರುತಿ ವ್ಯಾನನ್ನು ಒಮ್ಮಗೆ ಸ್ಟಾಟ್ ಮಾಡಿ ನಿಕಲೋಸ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ್ದು ಪರಿಣಾಮವಾಗಿ ಬೈಕನಲ್ಲಿದ್ದ ನಿಕಲೋಸ್ ಹಾಗು ಅವರ ತಂಗಿ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೇಣುಬಿಗಿದು ಕೊಂಡು ವ್ಯಕ್ತಿ ಆತ್ಮಹತ್ಯೆ:
ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಶಿರಂಗಾಲ ಗ್ರಾಮದ ಎನ್.ಬಿ. ರಮೇಶ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 20-1-2019 ರಂದು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾರಿಯ ವಿಚಾರದಲ್ಲಿ ಹಲ್ಲೆ:
ಸೋಮವಾರಪೇಟೆ ತಾಲೋಕು ಸಿದ್ದಲಿಂಗಪುರ ಗ್ರಾಮದ ನಿವಾಸಿ ಎನ್.ಪಿ. ತಿಮ್ಮಯ್ಯ ನವರು ಅರಿಶಿನಗುಪ್ಪೆಯಲ್ಲಿರುವ 3.70 ಎಕರೆ ಜಾಗದಲ್ಲಿ ಕೃಷಿ ಮಾಡಿದ್ದು, ಅದರ ಒತ್ತಿನಲ್ಲಿರುವ ಅವರ ಅಣ್ಣ ಪೊನ್ನಪ್ಪರವರ ಜಮೀನಿಗೆ ಹೋಗಲು ಎನ್.ಪಿ. ತಿಮ್ಮಯ್ಯನವರ ಜಮೀನಿನ ಮುಖಾಂತರ 12 ಅಡಿ ದಾರಿ ಬಿಟ್ಟಿದ್ದು, ಅಷ್ಟು ಜಾಗ ಬಿಟ್ಟಿರುವುದು ಸಾಲದೆಂದು ಆಗಾಗ್ಗೆ ಜಗಳ ಮಾಡುತ್ತಿದ್ದುದಾಗಿದೆ. ದಿನಾಂಕ 20.01.2019 ರಂದು ಮದ್ಯಾಹ್ನ 1.45 ಗಂಟೆಗೆ ಎನ್.ಪಿ. ತಿಮ್ಮಯ್ಯನವರು ತಮ್ಮ ಜಮೀನಿನಲ್ಲಿರುವಾಗ್ಗೆ ಗಿರೀಶ, ಪ್ರಕಾಶ, ಪೊನ್ನಪ್ಪ, ಮತ್ತು ಸತ್ಯವತಿ ರವರುಗಳು ಅಲ್ಲಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.