Crime News

ದೇವಸ್ಥಾನದಿಂದ ಕಳವುವಿಗೆ ಯತ್ನ:

ದಿನಾಂಕ       21-1-2019 ರಂದು 03-00 ಗಂಟೆ ಸಮಯದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಬಜೆಗುಂಡಿ ಗ್ರಾಮದಲ್ಲಿರುವ ಮಾರಿಯಮ್ಮ ದೇವಾಲಯದ ಗರ್ಭಗುಡಿಯ ಬಾಗಿಲಗೆ ಹಾಕಿದ ಬೀಗವನ್ನು  ಅದೇ ಗ್ರಾಮದ ಚೆಲುವ ಎಂಬ ವ್ಯಕ್ತಿ ಮುರಿದು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಎಂ. ಸುಬ್ರಮಣಿ ಎಂಬವರು ಕಂಡು ಅಕ್ಕ ಪಕ್ಕದ ಮನೆಯವರೆಲ್ಲಾ ಸೇರಿ ಆತನನ್ನು ಹಿಡಿದು ವಿಚಾರಮಾಡಿದಲ್ಲು  ಆತ ಕಳ್ಳತನಕ್ಕೆ ಯತ್ನಿಸಿರುವುದು ಕಂಡು ಬಂದಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಆರೋಪಿ ಚೆಲುವ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ದೇವಸ್ಥಾನದ ಅಕ್ಕ-ಪಕ್ಕ ವಾಸಿಸುವ ಜನರು ಆತನನ್ನು ಹಿಡಿದು ಕೈಗಳಿಂದ ಮತ್ತು ದೊಣ್ಣೆಗಳಿಂದ ಥಳಿಸಿ ಗಾಯಪಡಿಸಿದ್ದಾರೆಂದು ಆರೋಪಿ ಚೆಲುವ ಸಹ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಹಲ್ಲೆ:

ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ಚೆಸ್ಕಾಂ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್‍.ಡಿ. ಲೋಕೇಶ್ ಮತ್ತು ದರ್ಶನ್ ಗೌಡ ಎಂಬವರು ದಿನಾಂಕ 21-1-2019 ರಂದು ವಿದ್ಯುತ್ ಸ್ಥಾವರವನ್ನು ನಿಲುಗಡೆಗೊಳಿಸಲು ಬೀಕಳ್ಳಿ ಗ್ರಾಮಕ್ಕೆ ಹೋದಾಗ  ಬೀಕಳ್ಳಿ ಗ್ರಾಮದ ರಾಜೇಶ್ ರವರು ಅವರನ್ನು ತಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ಧಗಳಿಂದ ಬೈಕು ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಹಕಾರ ಸಂಘದಿಂದ ಹಣ ದುರುಪಯೋಗ:

ನಾಪೋಕ್ಲು ಠಾಣೆ ವ್ಯಾಪ್ತಿಯ ಚೆಯ್ಯಂಡಾಣೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ಶ್ರೀಮತಿ ಸಿ.ಎಂ.ಗೋಪಿ, ಬಿ.ಎಸ್. ಅಯ್ಯಪ್ಪ, ಸಿ.ಕೆ. ಚೆಂಗಪ್ಪರವರುಗಳು 2016-17 ಮತ್ತು 2017-18ನೇ ಸಾಲಿನಲ್ಲಿ ಒಟ್ಟು ರೂ.1,26,38,435/- ಗಳಷ್ಟು ಹಣವನ್ನು ದುರುಪಯೋಗಪಡಿಸಿರುತ್ತಾರೆಂದು ಸದರಿ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಪಿ. ಮಾದಪ್ಪ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

ಮಡಿಕೇರಿ ತಾಲೋಕು ಅರೆಕಾಡು ಗ್ರಾಮದ ಕೆ.ಜೆ. ಪೌಲೋಸ್ ಎಂಬವರು ದಿನಾಂಕ 19-1-2019 ರಂದು ಸಂಜೆ 5-00 ಗಂಟೆಗೆ ತಮ್ಮ ಬಾಪ್ತು ಮೋಟಾರ್ ಸೈಕಲನ್ನು ಅರೆಕಾಡು ಗ್ರಾಮದ ಬಸ್‍ ಶೆಲ್ಟರ್ ಹತ್ತಿರ ನಿಲ್ಲಿಸಿ  ಸಿದ್ದಾಪುರಕ್ಕೆ ಹೋಗಿ ರಾತ್ರಿ 7-30 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಮಡು ಹೋಗಿರುವುದು ಕಂಡು ಬಂದಿದ್ದು  ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು:

ಪೊನ್ನಂಪೇಟೆ ಠಾಣಾ ಸರಹದ್ದಿನ ಕೊಡವಸಮಾಜದ ಬಳಿ ದಿನಾಂಕ 27-12-2018 ರಂದು ರಾತ್ರಿ  8-30 ಗಂಟೆಗೆ ಹಳ್ಳಿಗಟ್ಟು ಗ್ರಾಮದ ವಾಸಿ ಬೇರಾ ಎಂಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ಹುದಿಕೇರಿ ಕಡೆಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಯಾಗಿ ಗಾಯಗೊಂಡು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-1-2019 ರಂದು ಸದರಿ ಬೇರಾರವರು ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಕತ್ತಿಯಿಂದ ಕಡಿದು ಕೊಲೆಗೆ ಯತ್ನ:

ದಿನಾಂಕ 21/01/2019 ರಂದು ಸಮಯ 1915 ಗಂಟೆಗೆ  ಗೋಣಿಕೊಪ್ಪ ಉಮಾ ಮಹೇಶ್ವರಿ ದೇವಸ್ಥಾನದ ಬಳಿ ಇರುವ ರಿಷನ್ ಸೈಮಾನ್ ಬಾಪ್ತು ಅಂಗಡಿಯ ಎದುರಿನಲ್ಲಿರುವ ಹಣ್ಣಿನ ಅಂಗಡಿಯನ್ನು ಇಟ್ಟುಕೊಂಡಿರುವ ಪ್ರಭು ಎಂಬಾತನು ಏಕಾ ಏಕೀ ರಿಷನ್ ಸೈಮಾನ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ತಲೆಯ ಹಿಂಬಾಗಕ್ಕೆ ಎರಡು ಬಾರಿ ಕತ್ತಿಯಲ್ಲಿ ಕಡಿದಿದ್ದು  ರಿಷನ್ ಸೈಮಾನ್ ತಿರುಗಿದಾಗ ಪುನಹ ಪ್ರಭು ಕಡಿಯಲು ಬಂದಾಗ ರಿಷನ್ ಸೈಮಾನ್ ತನ್ನ ಎಡ ಕೈ ಯಿಂದ ತಡೆದಾಗ ಎಡ ಕೈಗೆ ಗಾಯವಾಗಿದ್ದು, ಈ ಸಂಬಂಧ ರಿಷನ್ ಸೈಮಾನ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಚೆಟ್ಟಿಮಾನಿ ಗ್ರಾಮದ ಟಿ.ಜಿ. ಶಶಿ ಎಂಬವರು ದಿನಾಂಕ 21-1-2019 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಶ್ರೀಮತಿ ಟಿ.ಎಸ್. ಶೃತಿರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.