Crime News

ಹಲ್ಲೆ ಪ್ರಕರಣ

           ದಿನಾಂಕ 18-01-2019 ರಂದು ಮಡಿಕೇರಿ ತಾಲೋಕಿನ ಎಮ್ಮೆಮಾಡು ಗ್ರಾಮದ ನಿವಾಸಿಯಾದ ವಿನೋದ್ ರವರ ಜಾಗದ ಒತ್ತಿನಲ್ಲಿರುವ ಕಾವೇರಿ ಹೊಳೆಯಿಂದ ನಾಪೋಕ್ಲು ನಗರದ ನಿವಾಸಿಗಳಾದ ರವಿ ಮತ್ತು ಇತರ ಮೂರು ಜನರು ಮರಳು ತೆಗೆಯುತ್ತಿದ್ದು ವಿಚಾರಿಸಿದಾಗ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಪರಸ್ಪರ ಡಿಕ್ಕಿ

             ದಿನಾಂಕ 21-01-2019 ರಂದು ಮಡಿಕೇರಿಯ ವಿಧ್ಯಾನಗರದ ನಿವಾಸಿ ಕೀರ್ತನ್ ಎಂಬುವವರು ಮೋಟಾರು ಸೈಕಲಿನಲ್ಲಿ ಹಿಂಬದಿ ಮನೋಜ್ ರವರನ್ನು ಕೂರಿಸಿಕೊಂಡು ಹೋಗುತ್ತಿರುವಾಗ ಆರ್ಮಿ ಕ್ಯಾಂಟಿನ್ ಬಳಿ ತಲುಪುವಾಗ ಎದುರಿನಿಂದ ಬಂದ ಮೋಟಾರು ಸೈಕಲನ್ನು ಮನೋಹರ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ್ದು, ಕೀರ್ತನ್ ರವರಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 22-01-2019 ರಂದು ಮಡಿಕೇರಿ ತಾಲೋಕಿನ ಹೊದವಾಡ ಗ್ರಾಮದ ನಿವಾಸಿಯಾದ ಇಸ್ಮಾಯಿಲ್ ರವರ ಮೇಲೆ ಕ್ಷುಲ್ಲಕ ಕಾರಣಕ್ಕೆ ರವೂಫ್ ಮತ್ತು ಸಿಯಾವುದ್ದೀನ್ ರವರು ಹಲ್ಲೆ ನಡೆಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಸೇವನೆ, ಪ್ರಕರಣ ದಾಖಲು

             ದಿನಾಂಕ 21-01-2019 ರಂದು ಮಡಿಕೇರಿ ನಗರದ ಸ್ಟೋನ್ ಹಿಲ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಕೇರಳ ರಾಜ್ಯದವರಾದ ಕಬೀರ್ ಮತ್ತು ಮುಸ್ತಫ ಎಂಬುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ

             ದಿನಾಂಕ 22-01-2019 ರಂದು ವಿರಾಜಪೇಟೆ ತಾಲೋಕಿನ ನಿಟ್ಟೂರು ಗ್ರಾಮದ ನಿವಾಸಿಗಳಾದ ಕಮಲಾಕ್ಷಿ, ಲತಾ ಮತ್ತು ವಿಜಯ, ಲಕ್ಷ್ಮಣ ರವರು ಕಾಫಿ ತೋಟದಿಂದ ಕಾಫಿಯನ್ನು ಕುಯಿದ ವಿಚಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದವರ ಮೇಲೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.