Crime News

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಶನಿವಾರಸಂತೆ ಠಾಣಾ ಸರಹದ್ದಿನ ನಿಡ್ತಕೊಪ್ಪಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ದಿನಾಂಕ 23-1-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮಗ ಭುವನ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ವಿಚಾರದಲ್ಲಿ ಜಗಳ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಿರುಗೂರು ಗ್ರಾಮದ ನಿವಾಸಿ ಕೋದೆಂಗಡ ಮುದ್ದಪ್ಪ ರವರು ದಿನಾಂಕ 23-1-2019 ರಂದು ತಮ್ಮ ಜಾಗದಲ್ಲಿ ಜೆ.ಸಿ.ಬಿ ಹಿಂದ ರಸ್ತೆ ನಿರ್ಮಿಸಿ ಒಣಗಿದ ಕಾಡಿಗೆ ಬೆಂಕಿಯನ್ನು ನೀಡಿದ್ದು ಇದೇ ಕಾರಣದಿಂದ  ಕೋದೆಂಗಡ ಮುದ್ದಪ್ಪ ಹಾಗು ಅವರ ಪಕ್ಕದ ಮನೆಯ  ಕೆ.ಕೆ. ಶರೀನ್ ಹಾಗು ಆಕೆಯ ಪತ್ನಿ ದೀಪಾ ರವರುಗಳ ನಡುವೆ ಜಗಳವಾಗಿ ಪರಸ್ಪರ ಹೊಡೆದಾಡಿದ್ದು.  ಕೋದೆಂಗಡ ಮುದ್ದಪ್ಪ ಹಾಗು ಕೆ.ಕೆ. ಶರೀನ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿರುತ್ತದೆ.

ರಸ್ತೆ ದಾಟುತ್ತಿದ್ದ ಮಗುವಿಗೆ ಪಿಕ್‍ಅಪ್ ವಾಹನ ಡಿಕ್ಕಿ:

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂಬಾಣೆ ಗ್ರಾಮದಲ್ಲಿ ದಿನಾಂಕ 22-1-2019 ರಂದು ಸಂಜೆ 4-00 ಗಂಟೆಗೆ ಕೋಪಟ್ಟಿ ಗ್ರಾಮದ ನಿವಾಸಿ ಶ್ರೀಮತಿ ಆಶಾ ತನ್ನ 6 ವರ್ಷದ ವಿಧೂಶ್ರೀ ಮಗಳೊಂದಿಗೆ ರಸ್ತೆಯನ್ನು ದಾಟುತ್ತಿದ್ದ ವೇಳೆ ಪಿಕ್‍ಅಪ್ ವಾಹನವೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.