Crime News

ಹಲ್ಲೆ ಪ್ರಕರಣ

ದಿನಾಂಕ 23/01/2019ರಂದು ನಾಪೋಕ್ಲು ಬಳಿಯ ಕೋಕೇರಿ ನಿವಾಸಿ ಕೆ.ವೈ.ಮಹಮದ್ ರಫೀಕ್ ಎಂಬವರು ಸಂಜೆ ಹೊತ್ತು ಕೋಕೇರಿಯ ಮಮ್ಮದ್ ಎಂಬವರ ಅಂಗಡಿಯ ಬಳಿ ಕುಳಿತುಕೊಂಡಿರುವಾಗ ಅಲ್ಲಿಗೆ ಬಂದ ಕೆ.ಯು.ಮಹಿಮುದ್ ಎಂಬವರು ಹಣದ ವಿಚಾರವಾಗಿ ಜಗಳವಾಡಿ ಕೆ.ವೈ.ಮಹಮದ್ ರಫೀಕ್‌ರವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ವಿರಾಜಪೇಟೆ ಬಳಿಯ ಕಂಡಂಗಾಲ ನಿವಾಸಿ ಬಿ.ಕೆ.ಮುತ್ತಮ್ಮ ಎಂಬವರು ಅವರ ಕಾಫಿ ತೋಟವನ್ನು 2016ನೇ ಸಾಲಿನಲ್ಲಿ ಕಂಡಂಗಾಲ ನಿವಾಸಿ ಎ.ಎಂ.ಸಾದಲಿ ಎಂಬವರಿಗೆ ವಾರ್ಷಿಕ ರೂ.1,05,000/- ಗಳಿಗೆ ಗುತ್ತಿಗೆಗೆ ನೀಡಿದ್ದು ಸಾದಲಿರವರು 2017ನೇ ಸಾಲಿನಲ್ಲಿ ರೂ.1,05,000/-ಗಳನ್ನು ಮುತ್ತಮ್ಮರವರಿಗೆ ಪಾವತಿಸಿದ್ದು ನಂತರ 2018ನೇ ಸಾಲಿನಲ್ಲಿ ಆ ವರ್ಷದ ಗುತ್ತಿಗೆ ಹಣವನ್ನು ಪಾವತಿಸದೆ ಗುತ್ತಿಗೆಯ ಒಪ್ಪಂದದಿಂದ ಹೊರ ಹೋಗಿ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.